ಮೋದಿ ಸರಕಾರ ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಗೆ ‘ಗುರಿಯಿಲ್ಲ’

Update: 2020-05-19 12:23 GMT

ಹೊಸದಿಲ್ಲಿ: ಕೋವಿಡ್-19 ಅಟ್ಟಹಾಸದಿಂದ ಬಹಳಷ್ಟು ಸಮಸ್ಯೆ ಎದುರಿಸುತ್ತಿರುವ ದೇಶದ ವಿವಿಧ ಕ್ಷೇತ್ರಗಳಿಗೆ ಪುನರುಜ್ಜೀವನ ನೀಡುವ ಉದ್ದೇಶದಿಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಗುರಿ ಇಲ್ಲದ್ದು ಎಂದು ಜಾಗತಿಕ ಸಂಶೋಧನಾ ಸಂಸ್ಥೆ ಎ ಬಿ ಬರ್ನ್‍ಸ್ಟೀನ್ ಹೇಳಿದೆ.

ಈ ಪ್ಯಾಕೇಜ್ ಸಂಪೂರ್ಣ ಗುರಿರಹಿತವಾಗಿದೆ  ಹಾಗೂ ಸಾಮಾನ್ಯ ಆರ್ಥಿಕ ಅಜೆಂಡಾ ಭಾಗವಾಗಬೇಕಿದ್ದ ಹಲವಾರು ಸಾಮಾನ್ಯ ಘೋಷಣೆಗಳಿಂದ ಕೂಡಿದೆ ಎಂದು ಸಂಸ್ಥೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

“ಜನರು ಹೆಚ್ಚು ಖರೀದಿ ಮಾಡುವಂತೆ ಮಾಡುವ ಹಾಗೂ ಉತ್ಪಾದನೆಯನ್ನು ಉತ್ತೇಜಿಸುವ ಮತ್ತು ಭಾರತದ ಆರ್ಥಿಕತೆಯನ್ನು ತಕ್ಷಣ ಮೇಲಕ್ಕೆತ್ತುವ ನಿಟ್ಟಿನಲ್ಲಿ ಮಹತ್ವದ ತೀರ್ಮಾನಗಳನ್ನು ಮಾಡಲು ಈ ಪ್ಯಾಕೇಜ್ ವಿಫಲವಾಗಿದೆ, ಜತೆಗೆ  ಘೋಷಿಸಲಾಗಿರುವ ಕೆಲವೊಂದು ಸುಧಾರಣಾ ಕ್ರಮಗಳು ಕೂಡ ಸಮಾಧಾನಕವಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ.

``ಒಟ್ಟಾರೆಯಾಗಿ ಇದೊಂದು ಕಳೆದುಹೋದ ಅವಕಾಶ'' ಎಂದೂ ಸಂಸ್ಥೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News