ವೆನಿಸ್ ಬೀಚ್‌ನಲ್ಲಿ ಮಾಜಿ ಡಬ್ಲ್ಯುಡಬ್ಲ್ಯುಇ ಕುಸ್ತಿಪಟುವಿನ ಮೃತದೇಹ ಪತ್ತೆ

Update: 2020-05-21 15:54 GMT

ವೆನಿಸ್, ಮೇ 21: ಇಲ್ಲಿನ ಬೀಚ್‌ನಲ್ಲಿ ರವಿವಾರ ನಾಪತ್ತೆಯಾಗಿದ್ದ ಮಾಜಿ ಡಬ್ಲ್ಯುಡಬ್ಲ್ಯುಇ ಕುಸ್ತಿಪಟು ಶರ್ಡ್ ಗ್ಯಾಸ್ಪರ್ಡ್ ಮೃತದೇಹವು ಲೈಫ್‌ಗಾರ್ಡ್ ಟವರ್ ಬಳಿ ಪತ್ತೆಯಾಗಿದೆ.

ಗ್ಯಾಸ್ಟರ್ಡ್ ರವಿವಾರ ಈ ಪ್ರದೇಶದಲ್ಲಿ ಮಗನ ಜತೆ ಈಜುತ್ತಿದ್ದರು. ಆ ಬಳಿಕ ಕಣ್ಮರೆಯಾಗಿದ್ದರು. ಸಮುದ್ರ ಕಿನಾರೆಯಿಂದ 50 ಯಾರ್ಡ್ ದೂರದಲ್ಲಿ ಬೃಹತ್ ಅಲೆ ಅಪ್ಪಳಿಸಿದಾಗ ಗ್ಯಾಸ್ಪರ್ಡ್ (39) ನಾಪತ್ತೆಯಾಗಿದ್ದರು. 10 ವರ್ಷದ ಮಗನನ್ನು ಜೀವರಕ್ಷಕ ಸಿಬ್ಬಂದಿ ಅಪಾಯದಿಂದ ಪಾರು ಮಾಡಿದ್ದರು.

ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಗ್ಯಾಸ್ಪರ್ಡ್, ಮೊದಲು ಮಗನನ್ನು ರಕ್ಷಿಸುವಂತೆ ರಕ್ಷಣಾ ಸಿಬ್ಬಂದಿಗೆ ಮನವಿ ಮಾಡಿಕೊಂಡಿದ್ದರು ಎಂದು ಕಾನೂನು ಜಾರಿ ಇಲಾಖೆ ಮೂಲಗಳು ಹೇಳಿವೆ.

ನಸುಕಿನಲ್ಲಿ ಜಾಗಿಂಗ್‌ಗೆ ಬಂದಿದ್ದ ವ್ಯಕ್ತಿಯೊಬ್ಬರು ಗ್ಯಾಸ್ಪರ್ಡ್ ದೇಹವನ್ನು ಮೊದಲು ಗುರುತಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಗ್ಯಾಸ್ಪರ್ಡ್ ಅವರ ದೇಹವನ್ನು ಹೋಲುವ ದೇಹ ಸಿಕ್ಕಿರುವುದನ್ನು ಲಾಸ್‌ ಏಂಜಲೀಸ್ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ದೃಢಪಡಿಸಿದ್ದಾರೆ.
ಡಬ್ಲ್ಯುಡಬ್ಲ್ಯುಇ ಸೂಪರ್‌ಸ್ಟಾರ್ ಶಡ್ ಗ್ಯಾಸ್ಪರ್ಡ್ ಅವರ ನಿಧನ ಅತೀವ ದುಃಖ ತಂದಿದೆ ಎಂದು ಡಬ್ಲ್ಯುಡಬ್ಲ್ಯುಇ ಟ್ವೀಟ್ ಮಾಡಿದೆ. ದಯಾಳು ಮತ್ತು ಹಾಸ್ಯಪ್ರವೃತ್ತಿಗೆ ಹೆಸರಾಗಿದ್ದ ಗ್ಯಾಸ್ಪರ್ಡ್, 2016ರಲ್ಲಿ ಫ್ಲೋರಿಡಾ ಗ್ಯಾಸ್ ಸ್ಟೇಷನ್‌ನಲ್ಲಿ ದೊಡ್ಡ ಡಕಾಯಿತಿ ಪ್ರಯತ್ನವನ್ನು ಏಕಾಂಗಿಯಾಗಿ ತಪ್ಪಿಸಿದ್ದರು.

ಅವರು ದೈತ್ಯ ವ್ಯಕ್ತಿ; ಬಲಿಷ್ಠ ಮಾಂಸಖಂಡಗಳಿದ್ದವು; ಆದರೆ ಅವರ ಹೃದಯ ಎಲ್ಲಕ್ಕಿಂತ ದೊಡ್ಡದು ಎಂದು ಸ್ನೇಹಿತ ಲ್ಯಾನ್ಸ್ ಕೀಸ್ ಕಂಬನಿ ಮಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News