ತೀವ್ರ ವಿರೋಧದ ನಡುವೆಯೇ ಕಾರ್ಮಿಕರ ಕೆಲಸದ ಅವಧಿ 2 ಗಂಟೆ ಹೆಚ್ಚಿಸಿದ ರಾಜ್ಯ ಸರಕಾರ

Update: 2020-05-23 12:21 GMT

ಬೆಂಗಳೂರು, ಮೇ 23: ವಿರೋಧ ಪಕ್ಷಗಳು ಹಾಗೂ ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧದ ನಡುವೆಯೇ ಕಾರ್ಖಾನೆಗಳಲ್ಲಿ ಕಾರ್ಮಿಕರ ದುಡಿಮೆಯ ಅವಧಿಯನ್ನು 8 ರಿಂದ 10 ಗಂಟೆಗೆ ಹೆಚ್ಚಳ ಮಾಡಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯದ ಎಲ್ಲ ಕೈಗಾರಿಕೆಗಳಿಗೆ ಕಾರ್ಮಿಕ ಕಾಯ್ದೆಯ ಸೆಕ್ಷನ್ 51 ಮತ್ತು 54ರಿಂದ ವಿನಾಯಿತಿ ನೀಡಲಾಗಿದೆ. ಇದರಿಂದ ಒಂದು ದಿನದ ಗರಿಷ್ಟ ಕೆಲಸದ ಅವಧಿ 9 ಗಂಟೆಯಿಂದ 10 ಗಂಟೆಗೆ ಹೆಚ್ಚಳ ಮಾಡಲಾಗಿದೆ. ಅಲ್ಲದೆ, ವಾರದಲ್ಲಿ 48 ಗಂಟೆಗಳಷ್ಟಿದ್ದ ಗರಿಷ್ಟ ದುಡಿಮೆಯ ಅವಧಿ 60 ಗಂಟೆಗಳಿಗೆ ಹೆಚ್ಚಳ ಮಾಡಿದ್ದು, ಇದಕ್ಕಿಂತ ಹೆಚ್ಚಿಗೆ ದುಡಿಸಿಕೊಳ್ಳುವಂತಿಲ್ಲ ಎಂದು ನಿರ್ದೇಶನ ನೀಡಲಾಗಿದೆ.

ಕೈಗಾರಿಕಾ ಕಾಯ್ದೆ ಸೆಕ್ಷನ್ 51ರ ಅನ್ವಯ ದಿನಕ್ಕೆ ಗರಿಷ್ಟ 9 ಗಂಟೆಗಿಂತ ಹೆಚ್ಚಿನ ಅವಧಿಗೆ ಕಾರ್ಮಿಕರನ್ನು ದುಡಿಸಿಕೊಳ್ಳುವಂತಿರಲಿಲ್ಲ. ಆದರೆ, ರಾಜ್ಯದಲ್ಲಿ ಕಾರ್ಮಿಕರ ದುಡಿಮೆ ಅವಧಿಗೆ 8 ಗಂಟೆಯಷ್ಟಿದ್ದು, ಇದೀಗ ಅದನ್ನು 10 ಗಂಟೆಗೆ ಹೆಚ್ಚಿಸಿದ್ದು, ಇದರಿಂದ 2 ಗಂಟೆ ದುಡಿಮೆ ಅವಧಿ ಹೆಚ್ಚಳವಾದಂತೆ ಆಗಿದೆ. ಮೇಲ್ಕಂಡ ಈ ಆದೇಶವು ಆಗಸ್ಟ್ 21ರ ವರೆಗೆ ಮೂರು ತಿಂಗಳ ಅವಧಿಗೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News