ಆರೋಗ್ಯ ಸೇತುವಿನಲ್ಲಿ ಗ್ರೀನ್ ಸ್ಟೇಟಸ್ ಇರುವ ದೇಶಿಯ ವಿಮಾನ ಪ್ರಯಾಣಿಕರಿಗೆ ಕ್ವಾರಂಟೈನ್ ಅಗತ್ಯವಿಲ್ಲ

Update: 2020-05-23 12:35 GMT

ಹೊಸದಿಲ್ಲಿ: ದೇಶೀಯ ವಿಮಾನಗಳಲ್ಲಿ ಆಗಮಿಸುವ ಪ್ರಯಾಣಿಕರಲ್ಲಿ ಕೊರೋನ ವೈರಸ್ ನ ಯಾವುದೇ ಲಕ್ಷಣಗಳಿಲ್ಲದವರಿಗೆ ಮತ್ತು ಆರೋಗ್ಯ ಸೇತು ಆ್ಯಪ್ ನಲ್ಲಿ ಗ್ರೀನ್ ಸ್ಟೇಟಸ್ ಹೊಂದಿರುವವರಿಗೆ ಕ್ವಾರಂಟೈನ್ ನ ಅಗತ್ಯವಿರುವುದಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

“ಆರೋಗ್ಯ ಸೇತು ಆ್ಯಪ್ ಇದ್ದರೆ ಅದು ಪಾಸ್ ಪೋರ್ಟ್ ನಂತೆ ಎಂದು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಯಾರಿಗಾದರೂ ಕ್ವಾರಂಟೈನ್ ಯಾಕೆ ಬೇಕು?” ಎಂದು ಹರ್ದೀಪ್ ಪ್ರಶ್ನಿಸಿದರು.

“ನಾನು ದೇಶಿಯ ವಿಮಾನ ಪ್ರಯಾಣಿಕರ ಬಗ್ಗೆ ಮಾತನಾಡುತ್ತಿದ್ದೇನೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಈಗಾಗಲೇ 14 ದಿನಗಳ ಕ್ವಾರಂಟೈನ್ ನಿಯಮವಿದೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News