ಭಾರೀ ಗಾಳಿಮಳೆ: ನಿರ್ಮಾಣ ಹಂತದ ಕಟ್ಟಡದಿಂದ ಇಟ್ಟಿಗೆ ಬಿದ್ದು ಟೆಕ್ಕಿ ಮೃತ್ಯು

Update: 2020-05-27 04:07 GMT

ಬೆಂಗಳೂರು, ಮೇ 27: ಬಲವಾದ ಗಾಳಿ ಬೀಸಿದಾಗ ನಿರ್ಮಾಣ ಹಂತದಲ್ಲಿದ್ದ ಪಕ್ಕದ ಕಟ್ಟಡದಿಂದ ಇಟ್ಟಿಗೆ, ಸಿಮೆಂಟ್ ಬ್ಯಾಗ್ ಮತ್ತು ಕಬ್ಬಿಣದ ರಾಡ್‌ಗಳ ಮೈಮೇಲಿ ಬಿದ್ದ ಪರಿಣಾಮ ಟಿಸಿಎಸ್ ಉದ್ಯೋಗಿಯೊಬ್ಬರು ಪ್ರಾಣ ಕಳೆದುಕೊಂಡ ಘಟನೆ ನಂದಿನಿ ಲೇಔಟ್‌ನಲ್ಲಿ ನಡೆದಿದೆ.

ರಾಮಣ್ಣ ಬ್ಲಾಕ್‌ನ ತಮ್ಮ ಮನೆಯ ಹೊರಗೆ ಆರ್.ಶಿಲ್ಪಾ ಎಂಬ ಇಂಜಿನಿಯರ್ ನಿಂತಿದ್ದಾಗ ಬಲವಾದ ಗಾಳಿ ಬೀಸಲಾರಂಭಿಸಿತು. ನೋಡನೋಡುತ್ತಿದ್ದಂತೆಯೇ ಗಾಳಿಯ ರಭಸಕ್ಕೆ ಪಕ್ಕದ ಕಟ್ಟಡದಿಂದ ಇಟ್ಟಿಗೆ, ಸಿಮೆಂಟ್ ಚೀಲ, ಕಬ್ಬಿಣದ ರಾಡ್‌ಗಳು ಮತ್ತು ನಿರ್ಮಾಣ ಸಾಮಗ್ರಿಗಳು ಅವರ ಮೇಲೆ ಬಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನು ಮಳೆ ಸಂಬಂಧಿ ದುರಂತ ಎಂದು ಪೊಲೀಸರು ಪರಿಗಣಿಸಿದ್ದು, ತಕ್ಷಣ ಶಿಲ್ಪಾ ಅವರನ್ನು ಆಸ್ಪತ್ರೆಗೆ ಒಯ್ದರೂ ಪ್ರಯೋಜನವಾಗಲಿಲ್ಲ. ಇದು ನಗರದಲ್ಲಿ ಮಳೆಗೆ ಮೊದಲ ಬಲಿ ಎನಿಸಿದೆ. ಮಳೆ ಆರಂಭವಾದ ಹಿನ್ನೆಲೆಯಲ್ಲಿ ಹೊರಗೆ ಒಣಗಲು ಹಾಕಿದ್ದ ಬಟ್ಟೆ ತೆಗೆಯಲು ಶಿಲ್ಪಾ ಹೊರಕ್ಕೆ ಬಂದಿದ್ದರು ಎಂಧು ಪ್ರತ್ಯಕ್ಷದರ್ಶಿ ನೆರೆಮನೆಯ ಕೆ.ವಾಣಿ ಹೇಳಿದ್ದಾರೆ.

ಮತ್ತೊಂದು ಘಟನೆಯಲ್ಲಿ ಹೊಸೂರು ರಸ್ತೆಯ ಬೇಗೂರು ಬಳಿ ಯಜಮಾನ್ ಲೇಔಟ್‌ನಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಯ ಮೇಲೆ ಮರ ಬಿದ್ದು ಮಹಿಳೆ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News