ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಪ್ರಕರಣ : ಆದಿತ್ಯ ರಾವ್‌ ವಿಚಾರಣೆಗೆ ಕೇಂದ್ರದ ಅನುಮತಿ ?

Update: 2020-05-28 18:40 GMT

ಬೆಂಗಳೂರು, ಮೇ.28: ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ‌ ಇರಿಸಿದ್ದ ಪ್ರಕರಣದ ಆರೋಪಿ ಆದಿತ್ಯ ರಾವ್‌ ನನ್ನು ನ್ಯಾಯಾಲಯದಲ್ಲಿ ವಿಚಾರಣೆ ಗೊಳಪಡಿಸಲು ರಾಜ್ಯ ಗೃಹ ಇಲಾಖೆಯೂ, ಕೇಂದ್ರ ಸರಕಾರದ ಅನುಮತಿಗೆ ಮುಂದಾಗಿತ್ತು ಎಂದು ಹೇಳಲಾಗುತ್ತಿದೆ.

ನಾಗರಿಕ ವಿಮಾನಯಾನ ಕಾಯ್ದೆಯ ಸುರಕ್ಷತೆ ಮತ್ತು ಕಾನೂನು ಬಾಹಿರ ಕೃತ್ಯವನ್ನು ನಿಗ್ರಹಿಸುವುದು (Suppression of Unlawful Act

against Saftey of Civil Aviation Act 1982)8 ಅಡಿಯಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲು ಕೇಂದ್ರ ಸರಕಾರದಿಂದ ಪೂರ್ವಾನುಮತಿ ಪಡೆಯುವ ಸಂಬಂಧದ ಕಡತಕ್ಕೆ ಅನುಮೋದನೆ ಪಡೆಯಲು ಮೇ 26ರಂದು ಗೃಹ ಸಚಿವ ಬಸವರಾಜ ಬೊಮ್ಮಯಿ ಅವರ ಮುಂದೆ ಮಂಡಿಸಿರುವುದು ತಿಳಿದುಬಂದಿದೆ.

ಕಾನೂನುಬಾಹಿರ ಚಟುವಟಿಕೆಗಳ ಅಡಿಯಲ್ಲಿ ಆರೋಪಿಯನ್ನು ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ರಾಜ್ಯ ಸರಕಾರದ ಪೂರ್ವಾನುಮತಿ ಅಗತ್ಯವಿಲ್ಲ. ಆದರೆ ನಾಗರಿಕ ವಿಮಾನಯಾನ ಕಾಯ್ದೆಯ ಸುರಕ್ಷತೆ ಮತ್ತುಕಾನೂನುಬಾಹಿರ ಕೃತ್ಯವನ್ನು ನಿಗ್ರಹಿಸುವ ಕಾಯ್ದೆ ಅಡಿಯಲ್ಲಿ ವಿಚಾರಣೆಗೊಳಪಡಿಸಲು ಕೇಂದ್ರ ಸರಕಾರದ ಪೂರ್ವಾನುಮತಿ ಅಗತ್ಯ ಎಂದು ಗೃಹ ಇಲಾಖೆಯ ಕಾನೂನು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದನ್ನಾಧರಿಸಿ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಬೇಕು ಎಂದು ಡಿಜಿಐಜಿಪಿಗೆ ಶೀಘ್ರದಲ್ಲೇ ಸೂಚಿಸಲಿದೆ ಎನ್ನಲಾಗಿದೆ. 

ಏನಿದು ಪ್ರಕರಣ?:  ಜನವರಿ 20ರಂದು ವಿಮಾನ ನಿಲ್ದಾಣದಲ್ಲಿ ಸ್ಪೋಟಕ‌ ಪತ್ತೆಯಾಗಿತ್ತು. ಜ.22ರಂದು ಆದಿತ್ಯ ರಾವ್‌ ಬೆಂಗಳೂರಿನ ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯಲ್ಲಿ ಶರಣಾಗಿದ್ದ. ಜ.23ರಂದು ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News