ಭಾರತದಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಜಿಗಿತ

Update: 2020-05-29 04:51 GMT

ಹೊಸದಿಲ್ಲಿ,ಮೇ 29: ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 7,466 ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದೆ ಎಂದು ಶುಕ್ರವಾರ ಬೆಳಗ್ಗೆ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಇದೇ ಮೊದಲ ಬಾರಿ 24 ಗಂಟೆಗಳ ಅವಧಿಯಲ್ಲಿ 7,000ಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಸತತ ಏಳನೇ ದಿನ ದಿನವೊಂದಕ್ಕೆ 6,000ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೋನಕ್ಕೆ 175 ಜನರು ಬಲಿಯಾಗಿದ್ದಾರೆ. ಇದೀಗ ದೇಶದಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳು 1,65,799ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 4,706ಕ್ಕೆ ತಲುಪಿದೆ. ವೈರಸ್‌ನಿಂದ ಚೇತರಿಸಿಕೊಂಡವರ ಸಂಖ್ಯೆ 71,106.

ಗುರುವಾರ ಸಂಜೆ ಸೋಂಕಿತರ ಸಂಖ್ಯೆ 1.6 ಲಕ್ಷ ಗಡಿ ದಾಟುತ್ತಿದ್ದಂತೆಯೇ ವಿಶ್ವದಲ್ಲಿ ಗರಿಷ್ಠ ಕೊರೋನ ಸೋಂಕಿತರಿರುವ ದೇಶಗಳ ಪೈಕಿ ಭಾರತ 9ನೇ ಸ್ಥಾನಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News