ಶನಿವಾರ 45,646 ಪ್ರಯಾಣಿಕರೊಂದಿಗೆ 529 ದೇಶಿಯ ಯಾನಗಳ ಕಾರ್ಯಾಚರಣೆ

Update: 2020-05-31 13:44 GMT

ಹೊಸದಿಲ್ಲಿ,ಮೇ 31: ಶನಿವಾರ 45,646 ಪ್ರಯಾಣಿಕರೊಂದಿಗೆ ಒಟ್ಟು 529 ದೇಶಿಯ ವಿಮಾನಯಾನಗಳು ಕಾರ್ಯಾಚರಣೆ ನಡೆಸಿವೆ ಎಂದು ನಾಗರಿಕ ವಾಯುಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ರವಿವಾರ ತಿಳಿಸಿದ್ದಾರೆ.

ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ಎರಡು ತಿಂಗಳು ಸ್ಥಗಿತಗೊಂಡಿದ್ದ ದೇಶಿಯ ವಿಮಾನಯಾನಗಳು ಮೇ 25ರಿಂದ ಪುನರಾರಂಭಗೊಂಡಿದ್ದವು.

ದೇಶಿಯ ವಿಮಾನಯಾನ ಸಂಸ್ಥೆಗಳು ಶುಕ್ರವಾರದವರೆಗೆ ಒಟ್ಟು 2,340 ಯಾನಗಳನ್ನು ನಿರ್ವಹಿಸಿದ್ದವು.

‘2020,ಮೇ 30ರಂದು ರಾತ್ರಿ 11:59ರವರೆಗೆ ದೇಶಿಯ ವಿಮಾನಯಾನ ಕಾರ್ಯಾಚರಣೆಗಳು:ನಿರ್ಗಮನ 529,ಪ್ರಯಾಣಿಕರ ಸಂಖ್ಯೆ 45,646.ಆಗಮನ 530,ಪ್ರಯಾಣಿಕರ ಸಂಖ್ಯೆ 45,622’ ಎಂದು ಪುರಿ ರವಿವಾರ ಟ್ವೀಟಿಸಿದ್ದಾರೆ.

ನಿರ್ಗಮನ ಕಾರ್ಯಾಚರಣೆಯನ್ನು ದಿನದ ಯಾನವನ್ನಾಗಿ ಪರಿಗಣಿಸಲಾಗುತ್ತದೆ.

ಲಾಕ್‌ಡೌನ್‌ಗೆ ಮುನ್ನ ದೇಶದಲ್ಲಿಯ ವಿಮಾನ ನಿಲ್ದಾಣಗಳು ಪ್ರತಿದಿನ ಸುಮಾರು 3,000 ದೇಶಿಯ ಯಾನಗಳನ್ನು ನಿರ್ವಹಿಸುತ್ತಿದ್ದವು. ನಾಗರಿಕ ವಾಯುಯಾನ ಮಹಾನಿರ್ದೇಶನಾಲಯದ ಅಂಕಿಅಂಶಗಳಂತೆ ಫೆಬ್ರವರಿಯಲ್ಲಿ ಇನ್ನೂ ಲಾಕ್‌ಡೌನ್ ಇಲ್ಲದಿದ್ದಾಗ ಪ್ರತಿದಿನ ಸುಮಾರು 4.12 ಲಕ್ಷ ಪ್ರಯಾಣಿಕರು ದೇಶಿಯ ಯಾನಗಳ ಸೇವೆಯನ್ನು ಬಳಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News