ಬೆಂಗಳೂರು: ಅಡುಗೆ ಅನಿಲ ಸ್ಫೋಟ; ದಂಪತಿಗೆ ಗಂಭೀರ ಗಾಯ

Update: 2020-05-31 14:45 GMT

ಬೆಂಗಳೂರು, ಮೇ.31:ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ದಂಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಎಚ್‍ಎಎಲ್ ಬಳಿಯ  ಅನಸಂದ್ರಪಾಳ್ಯದಲ್ಲಿ ನಡೆದಿದೆ.

ರವಿವಾರ ಮುಂಜಾನೆ ಈ ಘಟನೆ ನಡೆದಿದ್ದು, ಸ್ಫೋಟದಿಂದ ಗಂಭೀರ ಗಾಯಗಳಾಗಿರುವ ಹಾಸನ ಮೂಲದ ದಂಪತಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News