ಭಾರೀ ಮಳೆ: ಬೆಂಗಳೂರಿನಲ್ಲಿ 5 ದಿನಗಳಲ್ಲಿ 1,100 ಮರಗಳು, 600ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ

Update: 2020-05-31 14:58 GMT

ಬೆಂಗಳೂರು, ಮೇ 31: ಸಿಲಿಕಾನ್ ಸಿಟಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಅನೇಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಬೆಸ್ಕಾಂನ ಮಾಹಿತಿ ಪ್ರಕಾರ ಭಾರೀ ಮಳೆಗೆ ನಾಲ್ಕೈದು ದಿನಗಳಲ್ಲಿ ಒಟ್ಟು 600ಕ್ಕೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, 1,100 ಮರಗಳು ಹಾಗೂ ರೆಂಬೆ, ಕೊಂಬೆಗಳು ಮುರಿದು ಬಿದ್ದು, ವಿದ್ಯುತ್ ಮೂಲ ಸೌಕರ್ಯಕ್ಕೆ ಹಾನಿಯುಂಟಾಗಿದೆ.

ಕೆ.ಆರ್.ಪುರಂ, ಯಶವಂತಪುರ, ವೈಟ್‍ಫೀಲ್ಡ್, ಕಾಡುಗೋಡಿ, ಎಚ್‍ಎಸ್‍ಆರ್ ಲೇಔಟ್, ಕೋರಮಂಗಲ, ಎಇಸಿಎಸ್ ಲೇಔಟ್, ಮಲ್ಲೇಶ್ವರಂ, ಕೆಂಗೇರಿ, ಆಸ್ಟೀನ್‍ ಟೌನ್, ಬೇಗೂರು ರಸ್ತೆ, ಕೆಎಚ್‍ಬಿ ಕಾಲನಿ, ಬಸವೇಶ್ವರ ನಗರ, ಜಯನಗರ, ಜೆಪಿ ನಗರ ಮುಖ್ಯ ರಸ್ತೆಯಲ್ಲಿ ಹೆಚ್ಚು ಕಾಲ ವಿದ್ಯುತ್ ಕಡಿತವಾಗಿರುವ ಬಗ್ಗೆ ವರದಿಯಾಗಿದೆ.

ಗುತ್ತಿಗೆದಾರರು, ಕಾರ್ಮಿಕರೆಲ್ಲಾ ಕೊರೋನ ವೈರಸ್ ಕಾರಣದಿಂದ ಅವರವರ ತವರಿಗೆ ಮರಳಿರುವುದು ದುರಸ್ಥಿ ಕಾರ್ಯವನ್ನು ನಿಧಾನಗೊಳಿಸಿದೆ. ಹೀಗಾಗಿ ಮಳೆಯಿಂದ ವಿದ್ಯುತ್ ಮೂಲಸೌಕರ್ಯಗಳಿಗೆ ಆಗಿರುವ ಹಾನಿಯನ್ನು ಸರಿಪಡಿಸಲು ಬೆಸ್ಕಾಂಗೆ ಹಲವು ದಿನಗಳು ಬೇಕಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News