ಕೊರೋನ ವೈರಸ್: 60 ಲಕ್ಷ ದಾಟಿದ ಜಾಗತಿಕ ಸೋಂಕಿತರ ಸಂಖ್ಯೆ

Update: 2020-05-31 16:28 GMT

ಪ್ಯಾರಿಸ್, ಮೇ 31: ಜಗತ್ತಿನಾದ್ಯಂತದ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ರವಿವಾರ 60 ಲಕ್ಷವನ್ನು ದಾಟಿದೆ. ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಸಾಂಕ್ರಾಮಿಕವು ವೇಗವಾಗಿ ಹರಡುತ್ತಿದ್ದು, ಮುಂದಿನ ಕೆಲವು ವಾರಗಳು ಆ ದೇಶಗಳಿಗೆ ಸಂಕಷ್ಟದ ದಿನಗಳಾಗಿರುವ ಸಾಧ್ಯತೆಯಿದೆ.

ಅದೇ ವೇಳೆ, ಜಗತ್ತಿನ ಹೆಚ್ಚಿನ ದೇಶಗಳು ಸಾಂಕ್ರಾಮಿಕವನ್ನು ತಡೆಯಲು ಹೇರಲಾಗಿದ್ದ ಬೀಗಮುದ್ರೆಗಳನ್ನು ಹಂತಹಂತವಾಗಿ ತೆರೆಯಲು ಆರಂಭಿಸಿವೆ ಹಾಗೂ ನೆಲಕಚ್ಚಿರುವ ಆರ್ಥಿಕತೆಗಳನ್ನು ಸರಿಪಡಿಸಲು ಮುಂದಾಗಿವೆ.

ದಕ್ಷಿಣ ಅಮೆರಿಕ ಖಂಡದಲ್ಲಿ ಸಾಂಕ್ರಾಮಿಕದ ಕೇಂದ್ರಬಿಂದುವಾಗಿರುವ ಬ್ರೆಝಿಲ್‌ನಲ್ಲಿ 5 ಲಕ್ಷ ಸೋಂಕು ಪ್ರಕರಣಗಳು ದಾಖಲಾಗಿವೆ. ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಅದು ಈಗ ಅಮೆರಿಕದಿಂದ ಮಾತ್ರ ಹಿಂದಿದೆ. ಅಲ್ಲಿ ಕೊರೋನ ವೈರಸ್‌ನಿಂದಾಗಿ ಸಂಭವಿಸಿರುವ ಸಾವಿನ ಸಂಖ್ಯೆ 30,000ವನ್ನು ಸಮೀಪಿಸುತ್ತಿದೆ.

ಅದೇ ವೇಳೆ, ಜಗತ್ತಿನಾದ್ಯಂತ ಕೋವಿಡ್-19ರಿಂದಾಗಿ ಮೃತಪಟ್ಟವರ ಸಂಖ್ಯೆ 3,68,000ವನ್ನು ದಾಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News