ಬೆಂಗಳೂರಿನಲ್ಲಿ ಇಂದು 21 ಮಂದಿಗೆ ಕೊರೋನ ದೃಢ: ಸೋಂಕಿತರ ಸಂಖ್ಯೆ 351ಕ್ಕೆ ಏರಿಕೆ

Update: 2020-05-31 16:19 GMT

ಬೆಂಗಳೂರು,ಮೇ31: ನಗರದಲ್ಲಿ ರವಿವಾರ ಹೊಸದಾಗಿ 21 ಕೊರೋನ ಪ್ರಕರಣ ಪತ್ತೆಯಾಗಿದ್ದು, ಡಿ.ಜೆ ಹಳ್ಳಿಯಲ್ಲಿ ಒಬ್ಬ ಪೊಲೀಸ್ ಸೇರಿದಂತೆ 5 ಪ್ರಕರಣ ಹಾಗೂ ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿಯ ಪತ್ನಿಯಲ್ಲಿ ಕೊರೋನ ದೃಢಪಟ್ಟಿದೆ.

ಪೊಲೀಸ್ ಸಿಬ್ಬಂದಿಗೆ ಕೊರೋನ: ಡಿ.ಜೆ ಹಳ್ಳಿಯ ಎಸ್.ಕೆ ಗಾರ್ಡನ್ ಸ್ಲಂನ ರೋಗಿ-2180 ನ ಸಂಪರ್ಕದಿಂದ 33 ವರ್ಷದ ಪೊಲೀಸ್ ಸಿಬ್ಬಂದಿಗೆ ಕೊರೋನ ಪತ್ತೆಯಾಗಿದೆ. ಈ ಮಹಿಳೆಯಿಂದ ರೋಗಿ-2931 21 ವರ್ಷದ ವ್ಯಕ್ತಿ, ರೋಗಿ-2931 24 ವರ್ಷದ ವ್ಯಕ್ತಿ, ರೋಗಿ-2933 61 ವರ್ಷದ ವ್ಯಕ್ತಿ ಹಾಗೂ 8 ವರ್ಷದ ಮಗುವಿಗೂ ಸೋಂಕು ಪತ್ತೆಯಾಗಿದೆ. ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರನ್ನು ಸೋಮವಾರದಿಂದ ಕ್ವಾರಂಟೈನ್ ಮಾಡಲಿದ್ದಾರೆ. ಇವರನ್ನು ನಿಗತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪಾಲಿಕೆ ಅಧಿಕಾರಿಯ ಪತ್ನಿಗೆ ಕೊರೋನ: ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿ ಅವರ ಪತ್ನಿಗೂ ಕೊರೋನ ಸೋಂಕು ದೃಢಪಟ್ಟಿದ್ದು, ಶ್ರೀರಾಂಪುರ ನಿವಾಸಿಯಾಗಿರುವ ಮಹಿಳೆಯಾಗಿದ್ದಾರೆ. ಸಹಾಯಕ ಕಂದಾಯ ಅಧಿಕಾರಿ ಸೇರಿ ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಮೂರು ಜನ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಆರು ಜನರನ್ನು ಪಾಲಿಕೆಯ ಅಧಿಕಾರಿಗಳು ಕ್ವಾರಂಟೈನ್ ಮಾಡಿದ್ದಾರೆ.

ಪಾದರಾಯನಪುರ ಕಾಡುತ್ತಿರುವ ಕೊರೋನ: ಪಾದರಾಯನಪುರದಲ್ಲಿ ಕೊರೋನ ಸೋಂಕಿತರ ಸಂಖ್ಯೆಯು ದಿನದಿಂದ ದಿನ ಹೆಚ್ಚುತ್ತಿದ್ದು, ರೋಗಿ- 3008 ನ 46 ವರ್ಷದ ಮಹಿಳೆಗೆ ಕೊರೋನ ಬಂದಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿರುವ 6 ಜನ ಹಾಗೂ ದ್ವಿತೀಯ ಸಂಪರ್ಕದಲ್ಲಿರುವ 6 ಜನರನ್ನು ಕ್ವಾರೆಂಟೈನ್ ಮಾಡಲಾಗಿದೆ. ಉಳಿದಂತೆ ಮಡಿಕೇರಿಯಿಂದ ನಗರಕ್ಕೆ ಬಂದಿರುವ 43 ವರ್ಷದ ವ್ಯಕ್ತಿಗೆ ಸೋಂಕು ಪತ್ತೆಯಾಗಿದೆ. ದೋಹಾದಿಂದ ಬಂದಿರುವ ರೋಗಿ-3188ನ 29 ವರ್ಷದ ವ್ಯಕ್ತಿ ಹಾಗೂ ರೋಗಿ-3189 ನ 25 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಬಂದಿರುವ ರೋಗಿ-3184ನ 49 ವರ್ಷದ ವ್ಯಕ್ತಿ, ರೋಗಿ-3187 ನ ಮಹಿಳೆ ಕೊರೋನ ಪತ್ತೆಯಾಗಿದೆ. ಇವರನ್ನು ನಿಗತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಶೇಷ ಆಯುಕ್ತ, ಸಹಾಯಕ ಆಯುಕ್ತರು ಕ್ವಾರೆಂಟೈನ್

ಪಾದರಾಯನಪುರ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಅವರ ಸಂಪರ್ಕದಲ್ಲಿದ್ದ ಪಾಲಿಕೆ ವಿಶೇಷ ಆಯುಕ್ತ ರವೀಂದ್ರ ಹಾಗೂ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತ ನಾಗೇಂದ್ರ ನಾಯಕ್ ಅವರನ್ನು ಕ್ವಾರೆಂಟೈನ್ ಮಾಡಲಾಗಿದೆ. ಇಬ್ಬರು ಪ್ರಾಥಮಿಕ ಸಂಪರ್ಕದಲ್ಲಿದ್ದರು. ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ನಡೆದ ವಿವಿಧ ಸಭೆಗಳಲ್ಲಿ ಭಾಗವಹಿಸಿದ್ದರು.

351ಕ್ಕೆ ಏರಿಕೆ: ನಗರದಲ್ಲಿ ಇಲ್ಲಿಯವರಿಗೆ 351 ಕೊರೋನ ಪ್ರಕರಣ ಪತ್ತೆಯಾಗಿದ್ದು, 231 ಜನರು ಗುಣಮುಖರಾಗಿದ್ದು, 115 ಜನರಿಗೆ ಸಕ್ರಿಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಜನರು ಮರಣ ಹೊಂದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 11,400 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News