ಕೊರೋನ ವಾರಿಯರ್ಸ್ ವಿರುದ್ಧ ಹಿಂಸೆ, ನಿಂದನೆ, ಅಸಭ್ಯ ವರ್ತನೆ ಸ್ವೀಕಾರಾರ್ಹವಲ್ಲ: ಪ್ರಧಾನಿ ಮೋದಿ

Update: 2020-06-01 07:32 GMT

 ಹೊಸದಿಲ್ಲಿ, ಜೂ.1: ವೈದ್ಯಕೀಯ ಸಮುದಾಯ ಹಾಗೂ ಕೊರೋನ ವಾರಿಯರ್ಸ್‌ಗಳು ನೊವೆಲ್ ಕೊರೋನ ವೈರಸ್ ಅಥವ ಕೋವಿಡ್-19 ವಿರುದ್ಧ ಹೋರಾಟವನ್ನು ಮುನ್ನಡೆಸಿದ್ದಾರೆ. ಕೊರೋನ ವಿರುದ್ಧ ಮುಂಚೂಣಿಯಲ್ಲಿರುವವರ ವಿರುದ್ಧ ಹಿಂಸೆ, ನಿಂದನೆ ಹಾಗೂ ಅಸಭ್ಯ ವರ್ತನೆ ಸ್ವೀಕಾರಾರ್ಹವಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

"ವೈರಸ್ ಕಣ್ಣಿದ ಕಾಣದ ವೈರಿ ಇರಬಹುದು. ಆದರೆ, ನಮ್ಮ ಯೋಧರು, ವೈದ್ಯಕೀಯ ಕಾರ್ಯಕರ್ತರು ಅಜೇಯರಾಗಿದ್ದಾರೆ. ಕಣ್ಣಿಗೆ ಕಾಣದವರು ಹಾಗೂ ಅಜೇಯರ ನಡುವಿನ ಹೋರಾಟದಲ್ಲಿ ನಮ್ಮ ವೈದ್ಯಕೀಯ ಕಾರ್ಯಕರ್ತರು ಜಯಶಾಲಿಯಾಗುವುದು ನಿಶ್ಚಿತ'' ಎಂದು ವೀಡಿಯೊ ಕಾನ್ಫರೆನ್ಸ್ ವೇಳೆ ಪ್ರಧಾನಿ ಹೇಳಿದ್ದಾರೆ. "ಭಾರತದ ಕೋವಿಡ್-19 ವಿರುದ್ಧದ ದಿಟ್ಟ ಹೋರಾಟದ ಆಳದಲ್ಲಿ ವೈದ್ಯಕೀಯ ಸಮುದಾಯ ಹಾಗೂ ನಮ್ಮ ಕೊರೋನ ವಾರಿಯರ್ಸ್‌ರ ಕಠಿಣ ಶ್ರಮವಿದೆ. ವಾಸ್ತವವಾಗಿ ವೈದ್ಯರು ಹಾಗೂ ವೈದ್ಯಕೀಯ ಕಾರ್ಯಕರ್ತರು ಸೈನಿಕರಿದ್ದಂತೆ. ಆದರೆ ಇವರಲ್ಲಿ ಸೈನಿಕರ ಸಮವಸ್ತ್ರವಿಲ್ಲ'' ಎಂದು ಮೋದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News