ಕರ್ತವ್ಯದ ಕೊನೆಯ ದಿನ ಕಚೇರಿ ನೆಲದಲ್ಲಿ ಮಲಗಿದ ಹಿರಿಯ ಐಪಿಎಸ್ ಅಧಿಕಾರಿ

Update: 2020-06-01 10:39 GMT

ತಿರುವನಂತಪುರಂ: ಕೇರಳದ ಅತ್ಯಂತ ಹಿರಿಯ ಐಪಿಎಸ್ ಅಧಿಕಾರಿ ಜೇಕಬ್ ಥಾಮಸ್ ಅವರು ರವಿವಾರ ತಮ್ಮ ಕರ್ತವ್ಯದ ಕೊನೆಯ ದಿನದಂದು ತಮ್ಮ ಕಚೇರಿಯ ನೆಲದ ಮೇಲೆ ಮಲಗಿದ್ದು, ಫೋಟೊ ವೈರಲ್ ಆಗಿದೆ.

1985 ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಥಾಮಸ್ ಅವರು ರವಿವಾರ ಬೆಳಗ್ಗೆ ತಮ್ಮ ಕಚೇರಿ ಕೊಠಡಿಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ನೆಲದಲ್ಲಿ ಬೆಡ್ ಶೀಟ್ ಹಾಸಿರುವುದು ಕಾಣಿಸುತ್ತದೆ. “ಕೊನೆಯ ದಿನದ ಆರಂಭ ಹಾಗೂ ಮಲಗುವುದು ಆಫೀಸ್ ಕೊಠಡಿಯಲ್ಲಿಯೇ” ಎಂದು ಅವರು ಬರೆದಿದ್ದಾರೆ.

ಥಾಮಸ್ ಅವರ ಹೆಚ್ಚಿನ ಸೇವಾ ಅವಧಿ ವಿವಿಧ ಸಂಸ್ಥೆಗಳು ಹಾಗೂ ಸಾರ್ವಜನಿಕ ರಂಗದ ಉದ್ದಿಮೆಗಳಲ್ಲಿ ಡೆಪ್ಯುಟೇಶನ್‍ನಲ್ಲಿ ಕಳೆದಿತ್ತು. ಅವರು ರವಿವಾರ ನಿವೃತ್ತಿಗೊಳ್ಳುವ ಸಮಯದಲ್ಲಿ ಕೇರಳ ಸರಕಾರದ ಸಾರ್ವಜನಿಕ ರಂಗದ ಸಂಸ್ಥೆ ಮೆಟಲ್ ಇಂಡಸ್ಟ್ರೀಸ್ ಇದರ ಆಡಳಿತ ನಿರ್ದೇಶಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News