ಅಂತರ್ ರಾಷ್ಟ್ರೀಯ ಗೌರವಕ್ಕೆ ಪಾತ್ರವಾದ ಕೊಕ್ಕರೆಬೆಳ್ಳೂರು ಗ್ರಾಮ

Update: 2020-06-01 18:41 GMT

ಬೆಂಗಳೂರು, ಜೂ.1: ಜನಸಮುದಾಯದ ನಡುವೆಯೇ ಪಕ್ಷಿಗಳು ವಾಸವಾಗಿರುವ ವಿಶಿಷ್ಟ ಪಕ್ಷಿಧಾಮ, ಕೊಕ್ಕರೆಬೆಳ್ಳೂರು ಗ್ರಾಮವು 'ಅರ್ಥ್ ಡೇ ನೆಟ್‍ವರ್ಕ್ ಸ್ಟಾರ್ ವಿಲೇಜ್' ಅಂತರ್ ರಾಷ್ಟ್ರೀಯ ಗೌರವಕ್ಕೆ ಪಾತ್ರವಾಗಿದೆ.

ಅಂತರ್ ರಾಷ್ಟ್ರೀಯ ಪರಿಸರ ಸಂಸ್ಥೆ 'ಅರ್ಥ್ ಡೇ ನೆಟ್‍ವರ್ಕ್' ಸಂಘಟನೆ ಕೊಕ್ಕರೆಬೆಳ್ಳೂರು ಗ್ರಾಮಕ್ಕೆ ಸಂಬಂಧಿಸಿದಂತೆ ಕಿರುಚಿತ್ರ ತಯಾರಿಸಿ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿತ್ತು. 'ಸ್ಟಾರ್ ವಿಲೇಜ್' ಗೌರವ ಸಿಕ್ಕ ಮಾಹಿತಿಯನ್ನು ಸಂಸ್ಥೆ ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ.

ಅರಣ್ಯ ಇಲಾಖೆ ಗ್ರಾಮವನ್ನು 'ಸಮುದಾಯ ಮೀಸಲು ಅರಣ್ಯ' ಎಂದು ಘೋಷಿಸಿದೆ. ಕೊಕ್ಕರೆಗಳು ಗೂಡುಗಳುಳ್ಳ ಮರಗಳ ಮಾಲಕತ್ವವನ್ನು ರೈತರಿಗೆ ನೀಡಿ ಪ್ರೋತ್ಸಾಹಧನವನ್ನೂ ನೀಡಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಯು ಪಕ್ಷಿಗಳ ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಸ್ಟಾರ್ ವಿಲೇಜ್ ಗೌರವವು ಸಂತಸ ತಂದಿದೆ ಎಂದು ಕೊಕ್ಕರೆಬೆಳ್ಳೂರಿನ ಹೆಜ್ಜಾರ್ಲೆ ಬಳಗದ ಅಧ್ಯಕ್ಷ ಬಿ.ಲಿಂಗೇಗೌಡ ಹೇಳಿದ್ದಾರೆ. ಈ ಕುರಿತು ನಮಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ನಮಗೂ ಹೆಜ್ಜಾರ್ಲೆ ಬಳಗದಿಂದ ತಿಳಿದು ಬಂದಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ) ಅಲೆಕ್ಸಾಂಡರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News