ಭಾರತ ಶೀಘ್ರದಲ್ಲೇ ಆರ್ಥಿಕ ಚೇತರಿಕೆ ಕಾಣಲಿದೆ: ನರೇಂದ್ರ ಮೋದಿ

Update: 2020-06-02 07:41 GMT

ಹೊಸದಿಲ್ಲಿ, ಜೂ.2: "ಈಗಾಗಲೇ ಕೊರೋನ ವೈರಸ್ ಲಾಕ್‌ಡೌನ್‌ನಿಂದ ಮುಕ್ತವಾಗಲು ಅನ್‌ಲಾಕ್-1ನೊಂದಿಗೆ ಪುನರುಜ್ಜೀವನ ಹಾದಿಯಲ್ಲಿರುವ ಭಾರತ ಖಂಡಿತವಾಗಿಯೂ ಶೀಘ್ರದಲ್ಲೇ ಆರ್ಥಿಕ ಚೇತರಿಕೆ ಕಾಣಲಿದೆ'' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಜಿಡಿಪಿ ದತ್ತಾಂಶವು 11 ವರ್ಷಗಳಲ್ಲಿ ನಿಧಾನಗತಿಯ ಬೆಳವಣಿಗೆಯನ್ನು ತೋರಿಸಿದ ಕೆಲವು ದಿನಗಳ ಬಳಿಕ ಕಾರ್ಪೋರೇಟ್‌ಗಳು ಹಾಗೂ ಅರ್ಥಶಾಸ್ತ್ರಜ್ಞರನ್ನು ಉದ್ದೇಶಿಸಿ ಮಾತನಾಡಿದ ಮೋದಿ, "ಹೌದು, ನಾವು ಬೆಳವಣಿಗೆಯನ್ನು ಮರಳಿ ಪಡೆಯುತ್ತೇವೆ. ಕೋವಿಡ್-19 ವಿರುದ್ಧ ಹೋರಾಟದಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಾವು ಸಮಯಕ್ಕೆ ಸರಿಯಾಗಿ ಕ್ರಮ ತೆಗೆದುಕೊಂಡಿದ್ದೇವೆ. ಇಡೀ ಜಗತ್ತನ್ನೇ ಒಂದು ವೈರಸ್ ಅಲ್ಲೋಲ ಕಲ್ಲೋಲ ಮಾಡಿದೆ. ನನ್ನನ್ನು ನಂಬಿರಿ, ಅದು ಅಷ್ಟೊಂದು ಕಷ್ಟವಲ್ಲ'' ಎಂದು ಹೇಳಿದರು.

"ನಾನು ಇಷ್ಟೊಂದು ಆತ್ಮವಿಶ್ವಾಸದಲ್ಲಿರುವುದನ್ನು ನೋಡಿ ನಿಮಗೆ ಅಚ್ಚರಿಯಾಗಬಹುದು. ನನಗೆ ಭಾರತದ ಪ್ರತಿಭೆ, ಹೊಸತನ, ಅವರ ಕಠಿಣ ಪರಿಶ್ರಮ ಹಾಗೂ ಬದ್ಧತೆಯ ಮೇಲೆ ನಂಬಿಕೆ ಇದೆ. ಭಾರತದ ತಂತ್ರಜ್ಞಾನ ಹಾಗೂ ಅವಿಷ್ಕಾರವನ್ನು ನಂಬುತ್ತೇನೆ. ರೈತರು, ಸಣ್ಣ ಕೈಗಾರಿಕೆಗಳು ಹಾಗೂ ಉದ್ಯಮಿಗಳು ಸಾಧಿಸಲಿದ್ದಾರೆ ಎಂದು ನಾನು ನಂಬುತ್ತೇನೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News