ಶೋಷಿತರು, ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಿದ ಧೀಮಂತ ನಾಯಕ ಅರಸು: ಯಡಿಯೂರಪ್ಪ

Update: 2020-06-06 12:13 GMT

ಬೆಂಗಳೂರು, ಜೂ. 6: ಶೋಷಿತರು ಹಾಗೂ ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬುವಂತಹ ಕಾರ್ಯಕ್ರಮಗಳ ಮೂಲಕ ಆ ವರ್ಗಗಳಿಗೆ ಗೌರವಯುತ ಬದುಕು ಕಟ್ಟಿಕೊಳ್ಳಲು ನೆರವಾದ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಸ್ಮರಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಅರಸು ಅವರ 38ನೆ ಪುಣ್ಯ ಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ದೇವರಾಜ ಅರಸು ಭೂ ಸುಧಾರಣೆ, ಜೀತ ಮುಕ್ತ, ಋಣಮುಕ್ತ ಸೇರಿದಂತೆ ಹಲವು ಕ್ರಾಂತಿಕಾರಕ ಕಾಯ್ದೆಗಳ ಮೂಲಕ ರಾಜ್ಯದಲ್ಲಿ ಬಡವರ ಕಲ್ಯಾಣ, ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.

ದೇವರಾಜ ಅರಸು ಅವರ ಹಾದಿಯಲ್ಲಿ ನಮ್ಮ ಸರಕಾರ ಹಿಂದುಳಿದ ವರ್ಗಗಳ ಹಾಗೂ ಕೆಳಜಾತಿ ಮತ್ತು ಕೆಳ ವರ್ಗಗಳ ಉನ್ನತ್ತಿಗೆ ಶ್ರಮಿಸುತ್ತಿದೆ. ದೇವರಾಜ ಅರಸು ಆದರ್ಶ ಮತ್ತವರ ಮಾರ್ಗದರ್ಶನದಲ್ಲಿ ಸರಕಾರ ಮುಂದುವರಿದಿದೆ ಎಂದು ಯಡಿಯೂರಪ್ಪ, ಅರಸು ಅವರ ಗುಣಗಾನ ಮಾಡಿದರು. ಇದೇ ವೇಳೆ ವಿಶ್ವ ಪರಿಸರ ದಿನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿ ಸಿಎಂ ಗಿಡವೊಂದನ್ನು ನೆಟ್ಟರು.

ಅಭಿವೃದ್ಧಿಗೆ ವೇಗ ನೀಡಿದವರು: ಶೋಷಿತ ವರ್ಗಗಳಿಗೆ ಧ್ವನಿ ತುಂಬಿ ವಿಪಕ್ಷ ಹಾಗೂ ಆಡಳಿತ ಪಕ್ಷಗಳೆಂಬ ಎರಡೂ ಚಕ್ರಗಳು ಸಮನಾಗಿ ತಿರುಗಿದರಷ್ಟೇ ರಾಜ್ಯದ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂದು ಮನಗಂಡಿದ್ದ ಮುತ್ಸದ್ದಿ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಪುಣ್ಯಸ್ಮರಣೆಯ ದಿನವಾದ ಇಂದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತೇನೆ' ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News