ಬಿಬಿಎಂಪಿ ವ್ಯಾಪ್ತಿಯ 70 ವಾರ್ಡ್ ಗಳಲ್ಲಿ ಕೊರೋನ ಸೋಂಕು ಪತ್ತೆ

Update: 2020-06-06 13:26 GMT

ಬೆಂಗಳೂರು, ಜೂ.6: ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‍ಗಳ ಪೈಕಿ 70 ವಾರ್ಡ್‍ಗಳಿಗೆ ಕೊರೋನ ಸೋಂಕು ಕಾಲಿಟ್ಟಿದೆ.

ನಗರದಲ್ಲಿ ಈಗಾಗಲೇ 40 ಕಂಟೈನ್ಮೆಂಟ್ ಝೋನ್‍ಗಳನ್ನು ಸ್ಥಾಪಿಸಿದ್ದರೂ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ಹೊಸ ವಾರ್ಡ್‍ಗಳಲ್ಲೂ ಕೊರೋನ ಸೋಂಕು ಕಾಣಿಸಿಕೊಳ್ಳುತ್ತಿದೆ.

ಬಿಬಿಎಂಪಿ ವ್ಯಾಪ್ತಿಯ ಬೊಮ್ಮನಹಳ್ಳಿ ವಲಯದ 6, ಮಹದೇವಪುರದ 7, ಪೂರ್ವ ವಲಯದ 16, ದಕ್ಷಿಣದಲ್ಲಿ 16, ಪಶ್ಚಿಮದಲ್ಲಿ 17, ಯಲಹಂಕದಲ್ಲಿ 3, ಆರ್ ಆರ್ ನಗರದಲ್ಲಿ 4 ಹಾಗೂ ದಾಸರಹಳ್ಳಿಯ 1 ವಾರ್ಡ್‍ನಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದೆ. ಕೊರೋನ ಸೋಂಕಿತರ ಜತೆ ಸಂಪರ್ಕ ಹೊಂದಿರುವವರನ್ನು ಪತ್ತೆಹಚ್ಚಲು ಸಾಧ್ಯವಾಗದೆ ಇರುವುದರಿಂದ ಸೋಂಕು ಹಸಿರು ವಲಯಗಳಿಗೂ ಕಾಲಿಡುತ್ತಿದೆ.

ಹೊಸ ವಾರ್ಡ್‍ಗಳಲ್ಲಿ ಹೆಚ್ಚುತ್ತಿರುವ ಎ ಸಿಂಪ್ಟಮ್ಯಾಟಿಕ್ ಕೇಸ್‍ಗಳು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸುತ್ತಿವೆ. 198 ವಾರ್ಡ್‍ಗಳ ಪೈಕಿ 70 ವಾರ್ಡ್‍ಗಳಿಗೆ ಕೊರೋನ ಕಾಲಿಟ್ಟಿರುವುದರಿಂದ ಉಳಿದ ವಾರ್ಡ್‍ಗಳಲ್ಲಿ ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News