ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಸಾಧಾರಣ ಮಳೆ

Update: 2020-06-06 17:08 GMT

ಬೆಂಗಳೂರು, ಜೂ.6: ನಗರದಲ್ಲಿ ಶನಿವಾರ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಿದ್ದು, ನಗರದ ಮಾರುತಿ ದೇವಸ್ಥಾನದ ಹತ್ತಿರ 33.5 ಮೀ.ಮೀ ಮಳೆಯಾಗಿದೆ.

ನಗರದ ನಾಗರಬಾವಿ, ಪಂಚಶೀಲನಗರ, ಕತ್ರಗುಪ್ಪೆ ಹಾಗೂ ಮೂಡಲಪಾಳ್ಯದಲ್ಲಿ ಒಂದೊಂದು ಮರ ಬಿದ್ದಿವೆ. ನಗರದ ಕೆಲವು ಕಡೆ ರಸ್ತೆಯಲ್ಲಿ ನೀರು ನಿತ್ತುಕೊಂಡಿದೆ. 

ಮಾರುತಿ ದೇವಸ್ಥಾನದ ಹತ್ತಿರ 33.5 ಮೀ.ಮೀ, ಅಗ್ರಹಾರ ದಾಸರಹಳ್ಳಿ 26 ಮೀ.ಮೀ, ನಾಗರಬಾವಿ 25 ಮೀ.ಮೀ, ಹಂಪಿನಗರ 23 ಮೀ.ಮೀ, ಬಸವಗುಂಡಿ 20 ಮೀ.ಮೀ, ಗಾಲಿ ಆಂಜನೇಯ ದೇವಸ್ಥಾನ ಹತ್ತಿರ 15.5 ಮೀ.ಮೀ, ಕೆಂಗೇರಿ 12 ಮೀ.ಮೀ, ಸಂಪಗಿರಾಮನಗರ 11 ಮೀ.ಮೀ, ಬಾಣಸವಾಡಿ 5.2, ಬಸವೇಶ್ವರ ನಗರ 2 ಮೀ.ಮೀ ಮಳೆ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News