ಭಾರತ-ಚೀನಾ ಮಧ್ಯೆ ರಾಜತಾಂತ್ರಿಕ, ಮಿಲಿಟರಿ ಮಾರ್ಗದ ಮೂಲಕ ಮಾತುಕತೆ ಮುಂದುವರಿಕೆ: ಸೇನೆಯ ಹೇಳಿಕೆ

Update: 2020-06-06 17:40 GMT

ಹೊಸದಿಲ್ಲಿ, ಜೂ.6: ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಪ್ರಸಕ್ತ ನೆಲೆಸಿರುವ ಪರಿಸ್ಥಿತಿಯ ಕುರಿತು ಭಾರತ ಮತ್ತು ಚೀನಾದ ಅಧಿಕಾರಿಗಳು ಸ್ಥಾಪಿತ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾತುಕತೆ ಮುಂದುವರಿಸಿದ್ದಾರೆ ಎಂದು ಭಾರತದ ಸೇನೆ ಶನಿವಾರ ಹೇಳಿದೆ.

ಆದ್ದರಿಂದ , ಮಾತುಕತೆಯ ಬಗ್ಗೆ ಈ ಹಂತದಲ್ಲಿ ಕಲ್ಪಿತ ಮತ್ತು ಆಧಾರರಹಿತ ವರದಿ ನೀಡುವುದು ಸರಿಯಲ್ಲ ಮತ್ತು ಮಾಧ್ಯಮಗಳು ಇಂತಹ ವರದಿಗಳನ್ನು ಗಮನಿಸಬಾರದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಉಭಯ ಸೇನೆಗಳ ಸ್ಥಳೀಯ ಕಮಾಂಡರ್‌ಗಳ ಮಧ್ಯೆ ಈಗಾಗಲೇ 12 ಸುತ್ತುಗಳ ಮಾತುಕತೆ ನಡೆದಿದ್ದು ಮೇಜರ್ ಜನರಲ್ ಶ್ರೇಣಿಯ ಅಧಿಕಾರಿಗಳ ಹಂತದಲ್ಲಿ 3 ಸುತ್ತುಗಳ ಮಾತುಕತೆ ನಡೆದಿದೆ.

ಶುಕ್ರವಾರ ಎರಡೂ ದೇಶಗಳ ಮಧ್ಯೆ ನಡೆದ ರಾಜತಾಂತ್ರಿಕ ಮಟ್ಟದ ಸಭೆಯಲ್ಲಿ ಉಭಯ ದೇಶಗಳ ಭಾವನೆ ಮತ್ತು ಚಿಂತನೆಗಳನ್ನು ಗೌರವಿಸಿ ಶಾಂತಿಯುತವಾಗಿ ಚರ್ಚಿಸುವ ಮೂಲಕ ಭಿನ್ನಾಭಿಪ್ರಾಯವನ್ನು ಸರಿಪಡಿಸಲು ಉಭಯ ದೇಶಗಳೂ ಒಪ್ಪಿಕೊಂಡಿವೆ ಎಂದು ಸೇನೆಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News