ಯುಜಿಸಿ ಪ್ರಕಟಿಸಿದ ಪಟ್ಟಿಯಲ್ಲಿ ಬೆಂಗಳೂರು ಕೃಷಿ ವಿವಿ, ಜಿಕೆವಿಕೆಗೆ ಸ್ಥಾನ

Update: 2020-06-06 17:53 GMT

ಬೆಂಗಳೂರು, ಜೂ.6: ಯುಜಿಸಿ ಪ್ರಕಟಿಸಿದ ಉನ್ನತ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವಾದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಭರ್ಜರಿ ಪ್ರಗತಿ ಸಾಧಿಸಿದೆ.

ಹಿಂದಿನ ಪಟ್ಟಿಯಲ್ಲಿ 200ಕ್ಕೂ ಹೆಚ್ಚು ಸ್ಥಾನಗಳ ಕೆಳಗೆ ಇದ್ದ ಜಿಕೆವಿಕೆ ಈಗ ರಾಷ್ಟ್ರಮಟ್ಟದಲ್ಲಿ 84ನೇ ರ‍್ಯಾಂಕಿಂಗ್‌ ಪಡೆದಿದೆ. ಕೃಷಿ ವಿಶ್ವವಿದ್ಯಾಲಯಗಳ ಪೈಕಿ 9ನೇ ಸ್ಥಾನಕ್ಕೆ ಏರಿದೆ.

ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗದ (ಯು.ಜಿ.ಸಿ.) ಮಾಹಿತಿ (2020) ಅನ್ವಯ ಪ್ರಸ್ತುತ 409 ರಾಜ್ಯ ಮತ್ತು 50 ಕೇಂದ್ರ ಸರಕಾರದ, 127 ಡೀಮ್ಡ್ (ಸರಕಾರಿ ಮತ್ತು ಖಾಸಗಿ) ಹಾಗೂ 349 ಖಾಸಗಿ ವಿಶ್ವವಿದ್ಯಾನಿಲಯಗಳು ದೇಶದಲ್ಲಿ ಉನ್ನತ ಶಿಕ್ಷಣ ಒದಗಿಸುತ್ತಿವೆ.

ಶಿಕ್ಷಣ ವಿಶ್ವದ ಭಾರತೀಯ ಸರ್ಕಾರದ ವಿಶ್ವವಿದ್ಯಾನಿಲಯಗಳ ರ‍್ಯಾಂಕಿಂಗ್‌ 2020-21 ನಡೆಸಲು ದೆಹಲಿಯ ಮಾರುಕಟ್ಟೆ ಸಂಶೋಧನೆ ಮತ್ತು ಅಭಿಪ್ರಾಯ ಸಂಗ್ರಹಣಾ ಕಂಪೆನಿ ಸೆಂಟರ್ ಫಾರ್ ಪೋರ್‍ಕ್ಯಾಸ್ಟಿಂಗ್ ಮತ್ತು ರೀಸರ್ಚ್ ಪ್ರೈ.ಲಿ.ಸಿ ಫೋರ್ ನ ಪ್ರತಿಷ್ಠಿತ 150 ಕ್ಷೇತ್ರ ಸಿಬ್ಬಂದಿ 25 ನಗರಗಳಲ್ಲಿನ 162 ವಿಶ್ವವಿದ್ಯಾಲಯಗಳ 2,214 ಬೋಧಕರು ಮತ್ತು 1126 ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ 828 ಔದ್ಯಮಿಕ ಪ್ರತಿನಿಧಿಗಳನ್ನೊಳಗೊಂಡ 4,168 ಮಾದರಿಯನ್ನು ಸಂದರ್ಶಿಸಿ ಮಾಹಿತಿ ಸಂಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News