ಕರ್ತವ್ಯದ ವೇಳೆ ಮೊಬೈಲ್ ಇಟ್ಟುಕೊಳ್ಳಲು ಸಿಬ್ಬಂದಿಗೆ ಬಿಎಂಟಿಸಿ ಸಮ್ಮತಿ

Update: 2020-06-06 18:23 GMT

ಬೆಂಗಳೂರು, ಜೂ.6: ಕರ್ತವ್ಯದ ವೇಳೆ ಮೊಬೈಲ್ ಇಟ್ಟುಕೊಳ್ಳಲು ಸಿಬ್ಬಂದಿಗೆ ಬಿಎಂಟಿಸಿ ಅನುಮತಿ ನೀಡಿದೆ.

ಈ ಹಿಂದೆ ಡ್ರೈವಿಂಗ್ ವೇಳೆ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿತ್ತು. ಮಾರ್ಗ ಮಧ್ಯೆ ಸಂಭವಿಸಿದ ಅಪಘಾತ, ಅವಘಡ, ಘಟನೆ, ಗಲಭೆ ಹಾಗೂ ಇತರೆ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಮತ್ತು ಪ್ರಸ್ತುತ ಸಂಸ್ಥೆಯಲ್ಲಿ ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಟಿಕೆಟಿಂಗ್ ಅಳವಡಿಸಲಾದ ಹಿನ್ನೆಲೆಯಲ್ಲಿ ಮೊಬೈಲ್ ಅವಶ್ಯಕತೆ ಇದೆ. ಇದರಿಂದಾಗಿ ಬಿಎಂಟಿಸಿ ನಿರ್ದೇಶನಗಳನ್ನು ಸೂಚಿಸಿ ಮೊಬೈಲ್ ಬಳಕೆಗೆ ಅವಕಾಶ ನೀಡಲಾಗಿದೆ.

ನಿರ್ದೇಶನಗಳು: ಬಿಎಂಟಿಸಿ ಮಾರ್ಗಸೂಚಿಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಚಾಲನಾ ಸಿಬ್ಬಂದಿ ತಮ್ಮ ಕರ್ತವ್ಯದ ಅವಧಿಯಲ್ಲಿ ಮೊಬೈಲ್ ದೂರವಾಣಿಯನ್ನು ತಮ್ಮ ಬಳಿ ಇಟ್ಟುಕೊಳ್ಳಲು ಅನುಮತಿ ನೀಡಲಾಗಿದೆ. ಚಾಲಕ, ಚಾಲಕ-ಕಂ-ನಿರ್ವಾಹಕರು ವಾಹನವನ್ನು ಚಾಲನೆ ಮಾಡುವಾಗ ಮೊಬೈಲ್ ದೂರವಾಣಿಯ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News