ಪಾಕ್ ಹಿರಿಯ ನಟಿ ಸಬಿಹಾ ಖಾನುಮ್ ಇನ್ನಿಲ್ಲ

Update: 2020-06-14 18:39 GMT

ಇಸ್ಲಾಮಾಬಾದ್,ಜೂ.15: ಪಾಕಿಸ್ತಾನದ ಗತಕಾಲದ ಅತ್ಯಂತ ಜನಪ್ರಿಯ ನಟಿ ಸಬಿಹಾ ಖಾನುಮ್ ಶುಕ್ರವಾರ ಅಮೆರಿಕದಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಸಬಿಹಾ ಅವರು ಮೂತ್ರಕೋಶದ ಖಾಯಿಲೆಯಿಂದ ಬಳಲುತ್ತಿದ್ದರು.

1935ರಲ್ಲಿ ನಟಿಸಿದ ಸಬಿಹಾ ಅವರು ನಿಜನಾಮಧೇಯ ಮುಖ್ತರ್ ಬೇಗಂ ಆಗಿತ್ತು. 1950 ಹಾಗೂ 1960 ದಶಕದಲ್ಲಿ ಅವರು ಪಾಕ್ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿಯಾಗಿದ್ದರು. 1990ರ ದಶಕದವರೆಗೂ ಅವರು ವಿವಿಧ ಪಾಕ್ ಚಿತ್ರಗಳಲ್ಲಿ ನಟಿಸಿದ್ದರು. ಟಿವಿ ಧಾರಾವಾಹಿಗಳಲ್ಲಿಯೂ ನಟಿಸಿ, ಆಕೆ ಹೆಸರು ಮಾಡಿದ್ದರು. 1986ರಲ್ಲಿ ಅವರು ಪಾಕ್ ಅಧ್ಯಕ್ಷರಿಂದ ಪ್ರೈಡ್‌ಆಫ್ ಪಾಕಿಸ್ತಾನ್ ಪ್ರಶಸ್ತಿ ಪಡೆದಿದ್ದರು.

1990ರ ದಶಕದಲ್ಲಿ ಚಿತ್ರರಂಗದಿಂದ ನಿವೃತ್ತ ಘೋಷಿಸಿದ ಸಬಿಹಾರ ಅವರು ತನ್ನ ಮಕ್ಕಳೊಂದಿಗೆ ವಾಸಿಸಲು ಅಮೆರಿಕಕ್ಕೆ ತೆರಳಿದ್ದರು.

ಸಬೀಹಾ ಅವರು ಪತಿ ಸಂತೋಷ್‌ಕುಮಾರ್ ಕೂಡಾ ಪಾಕಿಸ್ತಾನದ ಜನಪ್ರಿಯ ನಟರಾಗಿದ್ದು ಅವರು 1982ರಲ್ಲಿ ನಿಧನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News