ಉಗ್ರರ ಜೊತೆ ಸಿಕ್ಕಿಬಿದ್ದಿದ್ದ ಮಾಜಿ ಡಿಎಸ್ಪಿ ದವೀಂದರ್ ಸಿಂಗ್ ಗೆ ಜಾಮೀನು ನೀಡಿದ ದಿಲ್ಲಿ ಕೋರ್ಟ್

Update: 2020-06-19 12:51 GMT

ಹೊಸದಿಲ್ಲಿ: ಹಿಝ್ಬುಲ್ ಮುಜಾಹಿದೀನ್ ಉಗ್ರರನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದಾಗ ಸಿಕ್ಕಿಬಿದ್ದಿದ್ದ ಜಮ್ಮು ಕಾಶ್ಮೀರದ ಮಾಜಿ ಡಿಎಸ್ಪಿ ದವೀಂದರ್ ಸಿಂಗ್ ಗೆ ದಿಲ್ಲಿ ಕೋರ್ಟ್ ಜಾಮೀನು ನೀಡಿದೆ ಎಂದು ವರದಿಯಾಗಿದೆ.

90 ದಿನಗಳೊಳಗಾಗಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸದ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ದವೀಂದರ್ ಸಿಂಗ್ ಮತ್ತು ಇನ್ನೋರ್ವ ಆರೋಪಿ ಇರ್ಫಾನ್ ಶಾಫಿ ಮೀರ್ ಗೆ ಜಾಮೀನು ನೀಡಲಾಗಿದೆ.

ಭಯೋತ್ಪಾದಕರ ಜೊತೆ ಸಂಬಂಧ ಹೊಂದಿರುವ ಮತ್ತು ಅವರಿಗೆ ಸಹಾಯ ಮಾಡಿದಂತಹ ಗಂಭೀರ ಪ್ರಕರಣದ ಬಗ್ಗೆ ಚಾರ್ಜ್ ಶೀಟ್ ಸಲ್ಲಿಸದ ದಿಲ್ಲಿ ಪೊಲೀಸರು ಸಿಎಎ ಪ್ರತಿಭಟನಕಾರರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News