ಪಾಕಿಸ್ತಾನದಲ್ಲಿ ಒಂದೇ ದಿನದಲ್ಲಿ 3892 ಮಂದಿಗೆ ಸೋಂಕು

Update: 2020-06-24 18:06 GMT

ಇಸ್ಲಾಮಾಬಾದ್,ಜೂ.24: ಪಾಕಿಸ್ತಾನದಲ್ಲಿ ಕೊರೋನ ಸೋಂಕು ಆರ್ಭಟಕ್ಕೆ ಕಡಿವಾಣವೇ ಇಲ್ಲವಾಗಿದ್ದು, ಕಳೆದ 24 ತಾಸುಗಳಲ್ಲಿ 3892 ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿವೆಯೆಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದರೊಂದಿಗೆ ದೇಶದಲ್ಲಿ ಕೋವಿಡ್-19ಗೆ ಬಲಿಯಾದವರ ಒಟ್ಟು ಸಂಖ್ಯೆ 1,88,892ಕ್ಕೇರಿದೆ.

 ಕಳೆದ 24 ತಾಸುಗಳಲ್ಲಿ 60ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಆ ದೇಶದಲ್ಲಿ ಕೊರೋನ ಸೋಂಕಿಗೆ ಬಲಿಯಾದವರ ಸಂಖ್ಯೆ 3755ಕ್ಕೇರಿದೆ. ಹಾಗೂ 3337 ರೋಗಿಗಳ ಪರಿಸ್ಥಿತಿ ಗಂಭೀರವಾಗಿರುವುದಾಗಿ ಸಚಿವಾಲಯ ವಿವರಿಸಿದೆ.

ಸಿಂಧ್ ಪ್ರಾಂತ್ಯದಲ್ಲಿ 72,656 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ದೇಶದಲ್ಲೇ ಗರಿಷ್ಠವಾಗಿದೆ. ಪಂಜಾಬ್ 69,536, ಖೈಬರ್-ಪಖ್ತೂನ್‌ಖ್ವಾ 23,888, ಇಸ್ಲಾಮಾಬಾದ್ 11,483, ಬಲೂಚಿಸ್ತಾನ 9634, ಗಿಲ್ಗಿಟ್-ಬಾಲ್ಟಿಸ್ತಾನ 1337 ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 892 ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News