150 ಪೈಲಟ್‌ಗಳನ್ನು ಕೈಬಿಟ್ಟ ವಿಮಾನಯಾನ ಕಂಪೆನಿ

Update: 2020-06-25 15:55 GMT

ಕರಾಚಿ (ಪಾಕಿಸ್ತಾನ), ಜೂ. 25: ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ ಲೈನ್ಸ್ (ಪಿಐಎ) ತನ್ನ 426 ಪೈಲಟ್‌ಗಳ ಪೈಕಿ ಸುಮಾರು 150 ಮಂದಿಯನ್ನು ಕೈಬಿಡಲು ನಿರ್ಧರಿಸಿದೆ. ಈ ಪೈಲಟ್‌ ಗಳು ಸಂಶಯಾಸ್ಪದ ಪರವಾನಿಗೆಗಳನ್ನು ಹೊಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದ ಬಳಿಕ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಏರ್‌ಲೈನ್ಸ್‌ ವಕ್ತಾರರೊಬ್ಬರು ತಿಳಿಸಿದರು.

ಇತ್ತೀಚೆಗೆ ಇದೇ ಕಂಪೆನಿಯ ವಿಮಾನವೊಂದು ಪತನಗೊಂಡಿರುವುದಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ದೇಶದ ನಾಗರಿಕ ವಿಮಾನಯಾನ ಸಚಿವರು ಸಂಸತ್ತಿನಲ್ಲಿ ಮಂಡಿಸಿರುವ ಸಮಯದಲ್ಲೇ ವಿಮಾನ ಕಂಪೆನಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಸರಕಾರಿ ವಿಮಾನಯಾನ ಸಂಸ್ಥೆಯಲ್ಲಿ ನಡೆಯುತ್ತಿದೆಯೆನ್ನಲಾದ ಅವ್ಯವಹಾರಗಳ ಬಗ್ಗೆಯೂ ಸಚಿವರು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ.

ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್‌ಗೆ ಸೇರಿದ ಏರ್‌ಬಸ್ ಎ320 ದಕ್ಷಿಣದ ನಗರ ಕರಾಚಿಯಲ್ಲಿ ಮೇ 22ರಂದು ಪತನಗೊಂಡಿತ್ತು. ವಿಮಾನದಲ್ಲಿ 8 ಸಿಬ್ಬಂದಿ ಸೇರಿ 99 ಮಂದಿ ಪ್ರಯಾಣಿಸುತ್ತಿದ್ದು, 97 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಪವಾಡಸದೃಶರಾಗಿ ಬದುಕುಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News