ಮಾದಕ ವಸ್ತು ಖರೀದಿ: ವಿದೇಶಿ ಪ್ರಜೆ ಬಂಧನ

Update: 2020-06-25 17:12 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.25: ಮಾದಕ ವಸ್ತು ಎಂಡಿಎಂಎ ಖರೀದಿಗೆ ಮುಂದಾಗಿದ್ದ ಮಲೇಷಿಯನ್ ಪ್ರಜೆಯೊರ್ವನನ್ನು ಚೆನ್ನೈ ಏರ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ವರದಿಯಾಗಿದ್ದಾರೆ.

ಕವಿ ಕುಮಾರ್(25) ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಆರೋಪಿ, ಎಂಡಿಎಂಎ ಮಾತ್ರೆಗಳನ್ನು ಜರ್ಮನಿ ದೇಶದಿಂದ ಆನ್‍ಲೈನ್ ಮೂಲಕ ಖರೀದಿ ಮಾಡಿ ಚೆನ್ನೈಗೆ ಕಳುಹಿಸುವಂತೆ ಹೇಳಿದ್ದಾನೆ. ಅದರಂತೆ ಚೆನ್ನೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾದಕ ವಸ್ತು ಎಂಡಿಎಂಎ ಮಾತ್ರೆಗಳು ತಲುಪಿದಾಗ, ಇದನ್ನು ಏರ್ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದರು.

ಇದಾದ ಬಳಿಕ ಆರೋಪಿ ಬೆಂಗಳೂರಿನ ಕೋರಮಂಗಲದಲ್ಲಿ ನೆಲೆಸಿರುವ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಈತನನ್ನು ಗುರುವಾರ ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News