ಕೊರೋನ: ಉಚಿತ ಪರೀಕ್ಷೆ ಕೋರಿದ್ದ ಅರ್ಜಿ ವಜಾ

Update: 2020-06-30 18:16 GMT

ಹೊಸದಿಲ್ಲಿ, ಜೂ.30: ದಿಲ್ಲಿಯಲ್ಲಿ ಎಲ್ಲಾ ಸರಕಾರಿ ಮತ್ತು ಖಾಸಗಿ ಆಸ್ಪತ್ರೆ, ಪ್ರಯೋಗಾಲಯಗಳಲ್ಲಿ ಕೊರೋನ ಸೋಂಕಿನ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಉಚಿತವಾಗಿ ಲಭ್ಯಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ದಿಲ್ಲಿ ಹೈಕೋರ್ಟ್ ತಿರಸ್ಕರಿಸಿದೆ.

ದಿಲ್ಲಿಯಲ್ಲಿ ಬಡವರು ಅಥವಾ ಶ್ರೀಮಂತರೆನ್ನುವ ಭೇದವಿಲ್ಲದೆ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನ ಸೋಂಕಿನ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಉಚಿತವಾಗಿ ನಡೆಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ನಿರಾಕರಿಸಿದ ನ್ಯಾಯಾಧೀಶರಾದ ಡಿಎನ್ ಪಟೇಲ್ ಮತ್ತು ಪ್ರತೀಕ್ ಜಲನ್ ಅವರಿದ್ದ ನ್ಯಾಯಪೀಠ, ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ಸಲ್ಲಿಸುವಾಗ ಸ್ವಲ್ಪ ಜವಾಬ್ದಾರಿ ಇರಬೇಕು ಎಂದು ಅರ್ಜಿದಾರರನ್ನು ತರಾಟೆಗೆತ್ತಿಕೊಂಡಿತು. ಆಗ ಅರ್ಜಿದಾರರು ಅರ್ಜಿಯನ್ನು ವಾಪಸು ಪಡೆಯುವುದಾಗಿ ತಿಳಿಸಿದಾಗ, ದಂಡ ಕಟ್ಟುವಂತೆ ಸೂಚಿಸಿತು. ದಿಲ್ಲಿಯು ಕೊರೋನ ವೈರಸ್ ಸೋಂಕಿತರಿಗೆ ಚಿಕಿತ್ಸೆ ಒದಗಿಸುವಾಗ ಮೃತಪಡುವ ಕೊರೋನ ಯೋಧರಿಗೆ 1 ಕೋಟಿ ಪರಿಹಾರ ಮೊತ್ತ ಘೋಷಿಸಿದ ಏಕೈಕ ರಾಜ್ಯವಾಗಿದೆ . ಆದ್ದರಿಂದ ಅವರ ಕೆಲಸದಲ್ಲಿ ಮಧ್ಯಪ್ರವೇಶಿಸಲಾಗದು ಎಂದು ನ್ಯಾಯಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News