100 ವರ್ಷಗಳಲ್ಲಿ ಮೊದಲ ಬಾರಿ ರಾಜ್ಯದ ಗಡಿ ಮುಚ್ಚಿದ ಆಸ್ಟ್ರೇಲಿಯ

Update: 2020-07-06 05:16 GMT

 ಸಿಡ್ನಿ, ಜು.7: ಆಸ್ಟ್ರೇಲಿಯದ ಎರಡು ಹೆಚ್ಚು ಜನಸಂದಣಿ ಇರುವ ರಾಜ್ಯಗಳ ನಡುವಿನ ಗಡಿಯನ್ನು ಮಂಗಳವಾರದಿಂದ ಅನಿರ್ದಿಷ್ಟಾವಧಿಗೆ ಮುಚ್ಚಲಾಗುವುದು ಎಂದು ವಿಕ್ಟೋರಿಯ ಪ್ರೀಮಿಯರ್ ಡೇನಿಯಲ್ ಆ್ಯಂಡ್ರೂಸ್ ಸೋಮವಾರ ಹೇಳಿದ್ದಾರೆ.

ತನ್ನ ರಾಜ್ಯದಲ್ಲಿ ಕೊರೋನವೈರಸ್ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಿದ್ದಾರೆ.

ಸುಮಾರು 100 ವರ್ಷಗಳ ಬಳಿಕ ಮೊದಲ ಬಾರಿ ನೆರೆಯ ನ್ಯೂ ಸೌತ್ ವೇಲ್ಸ್‌ನೊಂದಿಗಿನ ಗಡಿಯನ್ನು ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ. 1919ರಲ್ಲಿ ಸ್ಪಾನೀಶ್ ಫ್ಲೂ ಸಾಂಕ್ರಾಮಿಕ ರೋಗ ಬಂದಾಗ ಎರಡು ರಾಜ್ಯಗಳ ನಡುವೆ ಚಲನವಲನವನ್ನು ರದ್ದುಪಡಿಸಲಾಗಿತ್ತು.

 ಇತ್ತೀಚೆಗಿನ ದಿನಗಳಲ್ಲಿ ವಿಕ್ಟೋರಿಯ ರಾಜಧಾನಿ ಮೆಲ್ಬೋರ್ನ್‌ನಲ್ಲಿ ಕೋವಿಡ್-19 ಪ್ರಕರಣಗಳು ಜಾಸ್ತಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು 30 ಉಪನಗರಗಳಲ್ಲಿ ಕಟ್ಟುನಿಟ್ಟಿನ ಸುರಕ್ಷಿತ ಅಂತರದ ಆದೇಶವನ್ನು ಜಾರಿಗೆ ತಂದಿದ್ದಾರೆ. 9 ಪಬ್ಲಿಕ್ ಹೌಸಿಂಗ್ ಟವರ್ಸ್‌ನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ. ರಾಜ್ಯದಲ್ಲಿ 127 ಹೊಸ ಕೋವಿಡ್-19 ಪ್ರಕರಣ ವರದಿಯಾಗಿದ್ದು, ದೇಶದಲ್ಲಿ ಕೊರೋನ ಬಾಧಿಸಿದ ಬಳಿಕ ಮೊದಲ ಬಾರಿ ಒಂದೇ ದಿನ ಇಷ್ಟೊಂದು ಪ್ರಕರಣ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News