ಬ್ರಿಟಿಷ್ ರಾಷ್ಟ್ರೀಯ ಆರೋಗ್ಯ ಸೇವೆಯ ವಾರ್ಷಿಕ ದಿನಾಚರಣೆ ಬೋರ್ಡ್ ನಲ್ಲಿ ಮಿಂಚಿದ ಡಾ. ಫರ್ಝಾನ ಹುಸೇನ್

Update: 2020-07-06 08:11 GMT

ಲಂಡನ್: ಇಂಗ್ಲೆಂಡ್‍ನ ರಾಷ್ಟ್ರೀಯ ಆರೋಗ್ಯ ಸೇವೆ (ನ್ಯಾಷನಲ್ ಹೆಲ್ತ್ ಸರ್ವಿಸ್) ತನ್ನ 72ನೇ ವರ್ಷಾಚರಣೆಯ ಅಂಗವಾಗಿ ಲಂಡನ್ ನಗರದಾದ್ಯಂತ ಅಳವಡಿಸಿರುವ ಹಲವು ಬಿಲ್‍ ಬೋರ್ಡ್ ಗಳಲ್ಲಿ ಕಾಣಿಸಿರುವ  ವೈದ್ಯರುಗಳ ಪೈಕಿ ಬ್ರಿಟಿಷ್ ಬಾಂಗ್ಲಾದೇಶಿ ವೈದ್ಯೆ ಡಾ. ಫರ್ಝಾನ ಹುಸೇನ್ ಕೂಡ ಮಿಂಚಿದ್ದಾರೆ. ಈ ಕುರಿತಂತೆ ಢಾಕಾದಲ್ಲಿರುವ ಬ್ರಿಟಿಷ್ ಹೈಕಮಿಷನ್ ತನ್ನ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಒಂದನ್ನು ಮಾಡಿದೆ.

“ಬ್ರಿಟಿಷ್-ಬಾಂಗ್ಲಾದೇಶಿ ವೈದ್ಯೆ, ರಾಷ್ಟ್ರೀಯ ಆರೋಗ್ಯ ಸೇವೆಯ ಸಿಬ್ಬಂದಿಯಾಗಿರುವ ಡಾ. ಫರ್ಝಾನ ಹುಸೇನ್ ಅವರಿಗೆ  ನಮ್ಮ ಗೌರವವನ್ನು ಸಲ್ಲಿಸುತ್ತಿದ್ದೇವೆ. ಕೋವಿಡ್-19 ಸಮಯದಲ್ಲಿ ಮುಂಚೂಣಿ ಸೇವೆ ಒದಗಿಸಿದ ತನ್ನ ವೈದ್ಯಕೀಯ ಸಿಬ್ಬಂದಿಗೆ ನ್ಯಾಷನಲ್ ಹೆಲ್ತ್ ಸರ್ವಿಸ್ ಈ ಮೂಲಕ ಗೌರವ ಸಲ್ಲಿಸಿದೆ” ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.

ಲಂಡನ್ ನಗರದ ನ್ಯೂಹ್ಯಾಂ ಎಂಬಲ್ಲಿರುವ ದಿ ಪ್ರಾಜೆಕ್ಟ್ ಸರ್ಜರಿಯಲ್ಲಿ ಕರ್ತವ್ಯ ನಿರ್ವಹಿಸುವ ಫರ್ಝಾನ ಹುಸೇನ್ ಅವರು ಲಂಡನ್‍ ನಲ್ಲಿ ಕಳೆದ ವರ್ಷ ನಡೆದ ಜನರಲ್ ಪ್ರಾಕ್ಟೀಸ್ ಅವಾರ್ಡ್ ಸಮಾರಂಭದಲ್ಲಿ ಪಲ್ಸ್'ಸ್ ಜನರಲ್ ಪ್ರಾಕ್ಟೀಷನರ್ ಆಫ್ ದಿ ಇಯರ್ ಪ್ರಶಸ್ತಿ ಗಳಿಸಿದ್ದರು.

ವೈದ್ಯಕೀಯ ಸೇವೆಯ ಗುಣಮಟ್ಟ ಸುಧಾರಣೆಗೆ, ನೇಮಕಾತಿ ಪ್ರಕ್ರಿಯೆಗಳನ್ನು ಕ್ರಮಬದ್ಧಗೊಳಿಸಲು ಅವರು ಸಾಕಷ್ಟು ಶ್ರಮವಹಿಸಿ  ಮನ್ನಣೆ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News