ಮೃತ ಮಗುವಿನ ಹೆತ್ತವರ ಮನವಿಯಂತೆ ರುದ್ರಭೂಮಿಯವರೆಗೂ ‘ರಾಮ ನಾಮ ಸತ್ಯ ಹೇ’ ಎಂದು ಜಪಿಸುತ್ತಾ ಹೋದ ಶೇಖ್ ಇಮ್ರಾನ್

Update: 2020-07-06 09:51 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: “ಆ ಮಗುವಿನ ಅಂತ್ಯಸಂಸ್ಕಾರದ ವೇಳೆ ಮಗುವಿನ ಮೃತದೇಹವನ್ನು ಹಿಡಿದುಕೊಂಡಿದ್ದ ಆಘಾತದಿಂದ ನಾನಿನ್ನೂ ಹೊರಬಂದಿಲ್ಲ” ಎಂದು 16 ದಿನಗಳ ಮಗುವಿನ ಅಂತ್ಯಸಂಸ್ಕಾರ ನಡೆಸಿದ ಹೆಬ್ಬಾಳದ ರಾಜು ಹೇಳುತ್ತಾರೆ.

ಕೊರೋನ ವೈರಸ್ ನಿಂದ ಬಳಲುತ್ತಿದ್ದ ಈ ಮಗು ಮೃತಪಟ್ಟಿದ್ದರೆ, ತಂದೆ-ತಾಯಿ ಈ ಮಾರಕ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಜುಲೈ1ರಂದು ಸಂಜೆ ಸುಮಾರು 5:30ರ ವೇಳೆಗೆ ಮಗು ಮೃತಪಟ್ಟಿತ್ತು. ಮಗುವಿನ ಹೆತ್ತವರು ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಗುವಿನ ಮುಖವನ್ನೂ ನೋಡಲು ಸಾಧ್ಯವಾಗಿರಲಿಲ್ಲ.

ಕೊರೋನದಿಂದ ಮೃತಪಟ್ಟವರ ದೇಹಗಳನ್ನು ಅಂತ್ಯಸಂಸ್ಕಾರ ನಡೆಸುವ ಸ್ಥಳಗಳಿಗೆ ಒಯ್ಯುವ ಮರ್ಸಿ ಏಂಜೆಲ್ಸ್ ವೀರೇಶ್ ಮತ್ತು ಶೇಖ್ ಇಮ್ರಾನ್ ರಿಗೆ ಮಗುವಿನ ಅಂತ್ಯಸಂಸ್ಕಾರದ ಕೆಲಸವನ್ನು ವಹಿಸಿತು.

“ನಾವು  ರಾತ್ರಿ 7 ಗಂಟೆಗೆ ಆಸ್ಪತ್ರೆಗೆ ತಲುಪಿದ್ದೆವು. ನಾವು ವೈರಸ್ ಪ್ರೂಫ್ ಒಂದರಲ್ಲಿ 500 ಗ್ರಾಂ ತೂಗುತ್ತಿದ್ದ ಮಗುವಿನ ಮೃತದೇಹವನ್ನು ಸುತ್ತಿದೆವು. ನಾನು ಕನಿಷ್ಠ ಕೊರೋನದಿಂದ ಮೃತಪಟ್ಟ ಕನಿಷ್ಠ 100 ಮೃತದೇಹಗಳನ್ನು ಸಾಗಿಸಿದ್ದೇನೆ. ಆದರೆ ಇದು ಅತ್ಯಂತ ನೋವು ನೀಡಿದ ಘಟನೆಯಾಗಿದೆ” ಎಂದು ವೀರೇಶ್ ಹೇಳುತ್ತಾರೆ.

ಹೆತ್ತವರು ಆಸ್ಪತ್ರೆಯಲ್ಲಿ ಕೊರೋನ ವಿರುದ್ಧ ಹೋರಾಟ ನಡೆಸುತ್ತಿದ್ದಂತೆ, ಇತ್ತ ಮಗುವಿನ ಅಂತ್ಯಸಂಸ್ಕಾರ ನಡೆಸಲಾಯಿತು. ರಾಜು ಎಂಬವರು ಮಗುವಿನ ಅಂತ್ಯಸಂಸ್ಕಾರ ನಡೆಸಿದರು.

ಹೆತ್ತವರು ರಾಮ ನಾಮ ಜಪಿಸುವಂತೆ ಹೇಳಿದರು: ಶೇಖ್ ಇಮ್ರಾನ್

ಮಗುವಿನ ಮೃತದೇಹವನ್ನು ಆಸ್ಪತ್ರೆಯಿಂದ ಅಂತ್ಯಕ್ರಿಯೆ ನಡೆಸುವ ಜಾಗದವರೆಗೆ ಹೊತ್ತೊಯ್ದ ಶೇಖ್ ಇಮ್ರಾನ್ ಅವರಲ್ಲಿ ಮಗುವಿನ ಹೆತ್ತವರು ರಾಮ ನಾಮ ಜಪಿಸುವಂತೆ ಮನವಿ ಮಾಡಿದ್ದರು.

“ಆಸ್ಪತ್ರೆಯಿಂದ ರುದ್ರಭೂಮಿಗೆ ತೆರಳಲು 20 ಕಿ.ಮೀ. ಸಮಯ ಹಿಡಿಯಿತು. ನಾನು ಮಗುವನ್ನು ಕೈಗಳಲ್ಲಿ ಹಿಡಿದುಕೊಂಡು ‘ರಾಮ ನಾಮ ಸತ್ಯ ಹೇ’ ಎಂದು ಹೇಳುತ್ತಲೇ ಹೋದೆ” ಎಂದವರು ವಿವರಿಸುತ್ತಾರೆ.

ಐಟಿ ವಲಯದಲ್ಲಿ ಕೆಲಸ ಮಾಡುತ್ತಿದ್ದ ತಂದೆ-ತಾಯಿ ಉತ್ತರ ಭಾರತದವರು. ಇವರಿಬ್ಬರೂ ಬೇರೆ ಆಸ್ಪತ್ರೆಯಲ್ಲಿರುವ ಕಾರಣ ಬೇರೆ ದಾರಿ ಕಾಣದೆ ಆಸ್ಪತ್ರೆಯವರೇ ಮುಂದೆ ನಿಂತು ಮಗುವಿನ ಅಂತ್ಯಸಂಸ್ಕಾರಕ್ಕೆ ಮುಂದಾಗಬೇಕಾಯಿತು.

ಕೃಪೆ: timesofindia

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News