ಅಮೆರಿಕದಲ್ಲಿ ಸಿಲುಕಿದ್ದ 200 ಉದ್ಯೋಗಿಯನ್ನು ವಿಮಾನದಲ್ಲಿ ಭಾರತಕ್ಕೆ ಕಳುಹಿಸಿಕೊಟ್ಟ ಇನ್‌ಫೋಸಿಸ್

Update: 2020-07-07 09:59 GMT

ಬೆಂಗಳೂರು, ಜು.7: ಕೊರೋನ ವೈರಸ್ ಬಿಕ್ಕಟ್ಟು ಹಾಗೂ ವೀಸಾ ವಿಚಾರಗಳಿಂದಾಗಿ ಅಮೆರಿಕದಲ್ಲಿ ಸಿಲುಕಿಹಾಕಿಕೊಂಡಿದ್ದ ತನ್ನ ಉದ್ಯೋಗಿಗಳನ್ನು ಐಟಿ ದೈತ್ಯ ಇನ್‌ಫೋಸಿಸ್ ಭಾರತಕ್ಕೆ ವಾಪಸ್ ಕಳುಹಿಸಿಕೊಟ್ಟಿದೆ.

ಎಲ್ಲರೂ ಚಾರ್ಟೆರ್ಡ್ ವಿಮಾನದಲ್ಲಿ ಸ್ವದೇಶಕ್ಕೆ ವಾಪಸಾಗಿದ್ದು, 200 ಉದ್ಯೋಗಿಗಳು ಹಾಗೂ ಅವರ ಕುಟುಂಬದವರು ಸೋಮವಾರ ಬೆಳಗ್ಗೆ ಬೆಂಗಳೂರು ತಲುಪಿದ್ದಾರೆ. ಇವರೆಲ್ಲರೂ ಬೆಂಗಳೂರು ಅಥವಾ ದೇಶದ ಇತರ ಭಾಗಗಳಿಂದ ಕೆಲಸ ಮಾಡಲಿದ್ದಾರೆ.

ವೀಸಾ ಅವಧಿ ಮುಗಿದ ಕಾರಣಕ್ಕೆ ಕೆಲವು ಇನ್‌ಫೋಸಿಸ್ ಉದ್ಯೋಗಿಗಳು ಅಮೆರಿಕದಲ್ಲಿ ಸಿಲುಕಿದ್ದರು. ಕೊರೋನ ವೈರಸ್ ಕಾಯಿಲೆಯ ಬಳಿಕ ಎಲ್ಲ ಅಂತರ್‌ರಾಷ್ಟ್ರೀಯ ವಿಮಾನ ಹಾರಾಟವು ರದ್ದುಗೊಂಡಿದೆ. ವಿಶೇಷವಾಗಿ 200ಕ್ಕೂ ಅಧಿಕ ಉದ್ಯೋಗಿಗಳು ಹಾಗೂ ಅವರ ಕುಟುಂಬದವರು ಅಮೆರಿಕದಿಂದ ಭಾರತಕ್ಕೆ ಬರುವಂತಾಗಲು ಕಂಪೆನಿಯು ಮೊದಲ ಬಾರಿ ಚಾರ್ಟೆರ್ಡ್ ವಿಮಾನವನ್ನು ಬುಕ್ ಮಾಡಿತ್ತು. ವಿಮಾನವು ಬೆಂಗಳೂರಿಗೆ ಬಂದಿಳಿಯುವ ಮೂಲಕ ಅನಿಶ್ಚಿತ ಪರಿಸ್ಥಿತಿಯು ತಿಳಿಯಾಗಿದೆ ಎಂದು ಇನ್‌ಫೋಸಿಸ್ ಎಕ್ಸಿಕ್ಯೂಟಿವ್ ಸಂಜೀವ್ ಬೋಡೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News