ಚೀನಾ ಜತೆಗಿನ ಗಡಿ ಸಂಘರ್ಷದಲ್ಲಿ ಅಮೆರಿಕಾ ಮಿಲಿಟರಿ ಭಾರತದ ಜತೆ ನಿಲ್ಲಲಿದೆ: ಶ್ವೇತ ಭವನದ ಹಿರಿಯ ಅಧಿಕಾರಿ

Update: 2020-07-07 12:20 GMT

ಹೊಸದಿಲ್ಲಿ :  ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ಕುರಿತಂತೆ ಅಮೆರಿಕಾದ ಮಿಲಿಟರಿ ಭಾರತದ ಜತೆಗೆ ದೃಢವಾಗಿ ನಿಲ್ಲಲಿದ, ಎಂದು  ಶ್ವೇತ ಭವನದ ಚೀಫ್ ಆಫ್ ಸ್ಟಾಫ್ ಮಾರ್ಕ್ ಮೀಡೋಸ್ ಹೇಳಿದ್ದಾರೆ.

“ಸಂದೇಶ ಸ್ಪಷ್ಟವಾಗಿದೆ. ಚೀನಾ ಅಥವಾ ಇನ್ಯಾರೋ ಆ ಪ್ರಾಂತ್ಯದಲ್ಲಿ ಅಥವಾ ಇಲ್ಲಿ ತಾನೇ ಅತ್ಯಂತ ಪ್ರಬಲ ಶಕ್ತಿಯಾಗುವ ನಿಟ್ಟಿನಲ್ಲಿ ಮುಂದಡಿಯಿಡುತ್ತಿರುವುದನ್ನು  ನಾವು ಸುಮ್ಮನೆ ನಿಂತುಕೊಂಡು ನೋಡುವುದಿಲ್ಲ,'' ಎಂದು ಫಾಕ್ಸ್ ನ್ಯೂಸ್ ಜತೆ ಮಾತನಾಡುತ್ತಾ ಅವರು ಹೇಳಿದರು.

``ನಮ್ಮ ಮಿಲಿಟರಿ ಅತ್ಯಂತ ಪ್ರಬಲವಾಗಿದೆ ಹಾಗೂ ಅತ್ಯಂತ ಪ್ರಬಲವಾಗಿಯೇ ಮುಂದುವರಿಯುವುದು,  ಅದು ಭಾರತ ಮತ್ತು ಚೀನಾ ನಡುವಿನ ಸಂಬಂಧಗಳಲ್ಲಿನ ಘರ್ಷಣೆ ಕುರಿತಾಗಿರಬಹುದು ಅಥವಾ ಇನ್ಯಾರಾದರೂ ಆಗಿರಬಹುದು,'' ಎಂದು ಅವರು ಹೇಳಿದರು.

ವಿವಾದಿತ ಸೌತ್ ಚೈನಾ ಸೀ ಪ್ರದೇಶದಲ್ಲಿ ಅಮೆರಿಕಾದ  ಯುದ್ಧವಿಮಾನಗಳು ಕವಾಯತು ನಡೆಸಿದ ಮೂರು ದಿನಗಳ ನಂತರ ಮೀಡೋ ಅವರ ಹೇಳಿಕೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News