ಕೊರೋನ ಸೋಂಕು: ಚೇತರಿಕೆ ಪ್ರಮಾಣ 61.13ಕ್ಕೇರಿಕೆ

Update: 2020-07-07 14:52 GMT

ಕೊರೋನ ಸೋಂಕು: ಚೇತರಿಕೆ ಪ್ರಮಾಣ 61.13ಕ್ಕೇರಿಕೆ

ಹೊಸದಿಲ್ಲಿ, ಜು.7: ಮಂಗಳವಾರ ಬೆಳಗ್ಗಿನವರೆಗಿನ 24 ಗಂಟೆಯ ಅವಧಿಯಲ್ಲಿ ದೇಶದಲ್ಲಿ 22,252 ಹೊಸ ಕೊರೋನ ಸೋಂಕು ದೃಢಪಟ್ಟಿದ್ದು, 467 ಜನ ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿತರ ಒಟ್ಟು ಸಂಖ್ಯೆ ಮಂಗಳವಾರ 7 ಲಕ್ಷದ 20 ಸಾವಿರದ ಗಡಿಯನ್ನು ಸಮೀಪಿಸಿದೆ ಎಂದು ಕೇಂದ್ರದ ಆರೋಗ್ಯ ಇಲಾಖೆಯ ವರದಿ ತಿಳಿಸಿದೆ.

 ದೇಶದಲ್ಲಿ 4,39,948 ಜನ ಕೊರೋನದಿಂದ ಗುಣಮುಖರಾಗಿದ್ದು, ಚೇತರಿಕೆಯ ಪ್ರಮಾಣ ಈಗ 61.13% ತಲುಪಿದೆ. ದೇಶದಲ್ಲಿ ಒಟ್ಟು ಕೊರೋನ ಸೋಂಕಿತರ ಸಂಖ್ಯೆ 7,19,665 ಆಗಿದ್ದರೆ ಇದರಲ್ಲಿ 2,59,557 ಸಕ್ರಿಯ ಪ್ರಕರಣಗಳು. ಸೋಂಕಿನಿಂದ ಸತ್ತವರ ಸಂಖ್ಯೆ 20,160ಕ್ಕೇರಿದೆ. ಭಾರತವು ರವಿವಾರ ರಶ್ಯವನ್ನು ಹಿಂದಿಕ್ಕಿ ಅತ್ಯಧಿಕ ಸೋಂಕಿತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದು ಅಮೆರಿಕ ಮತ್ತು ಬ್ರೆಜಿಲ್ ಬಳಿಕದ ಸ್ಥಾನದಲ್ಲಿದೆ.

ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಈಗಲೂ ಅಗ್ರಸ್ಥಾನದಲ್ಲಿಯೇ ಮುಂದುವರಿದಿದ್ದರೆ ತಮಿಳುನಾಡು, ದಿಲ್ಲಿ, ಗುಜರಾತ್, ಉತ್ತರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಬಳಿಕದ ಸ್ಥಾನದಲ್ಲಿವೆ ಎಂದು ಕೇಂದ್ರ ಗೃಹ ಇಲಾಖೆಯ ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News