ಕೋವಿಡ್ 19: ರೆಮ್ಡಿಸಿವಿರ್ ಔಷಧ ತಯಾರಿಕೆಗೆ ಅನುಮತಿ ಕೋರಿ ಕೇಂದ್ರಕ್ಕೆ ಮನವಿ- ಸಚಿವ ಡಾ.ಸುಧಾಕರ್

Update: 2020-07-07 17:12 GMT

ಬೆಂಗಳೂರು, ಜು.7: ಮುಂದಿನ ದಿನಗಳಲ್ಲಿ ಕೊರೋನ ಸೋಂಕಿತರು ಗುಣಮುಖರಾಗುವ ಸಲುವಾಗಿ ರೆಮ್ಡಿಸಿವಿರ್ ಔಷಧ ಬಳಕೆ ಮಾಡಲಾಗುತ್ತದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೆಮ್ಡಿಸಿವಿರ್ ಔಷಧ ಬಳಕೆಯು ಉತ್ತಮ ಫಲಿತಾಂಶ ಬಂದಿದ್ದು, ಇದರ ತಯಾರಿಕೆಗೆ ಅನುಮತಿ ಕೋರಿ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಕೇಂದ್ರ ಸರಕಾರದಿಂದ ಅನುಮತಿ ಸಿಕ್ಕಿದ ಕೂಡಲೇ ಮೈಸೂರು ಜಿಲ್ಲೆಯ ನಂಜನಗೂಡಿನ ಜುಬಿಲಿಯಂಟ್ ಕಂಪನಿಯಲ್ಲೇ ಔಷಧಿ ತಯಾರಿಸಲಾಗುತ್ತೆ. ಸದ್ಯ ಸರಕಾರದಿಂದ ಕೋವಿಡ್ ಸೋಂಕಿತರಿಗೆ ಉಚಿತವಾಗಿಯೇ ಈ ಔಷಧ ನೀಡಲಾಗುತ್ತದೆ. ಇದನ್ನ ಹಲವು ಖಾಸಗಿಯವರು ಬೇರೆ ಬೇರೆ ಮೂಲಗಳಿಂದ ತರಿಸಿಕೊಂಡು ಬ್ಲಾಕ್‍ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ರೀತಿ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಸುಧಾಕರ್ ಎಚ್ಚರಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳು ಇನ್ನು ಕೂಡ ಯಾವ ಪ್ರಮಾಣದಲ್ಲಿ ಹಾಸಿಗೆ ನೀಡಬೇಕು, ಅದನ್ನ ನೀಡಲು ಆಗಿಲ್ಲ. ಈ ಕಾರಣಕ್ಕಾಗಿ ನಾಳೆ ಸಭೆ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹೋಂ ಐಸೋಲೇಶನ್ ಚಿಕಿತ್ಸೆ ಉಚಿತ: ಇನ್ನು ಎ ಸಿಮ್ಟಮ್ಯಾಟಿಕ್ ಸೋಂಕಿತರಿಗೆ ಅಂದರೆ ರೋಗ ಲಕ್ಷಣಗಳು ಇಲ್ಲದವರಿಗೆ ಆಸ್ಪತ್ರೆಯ ಬದಲು ಹೋಂ ಐಸೋಲೇಶನ್‍ಗೆ ಆದೇಶ ನೀಡಲಾಗಿದೆ. ಅಂದರೆ ಮನೆಯಲ್ಲಿಯೇ ಪ್ರತ್ಯೇಕವಾಗಿ ನಿಗಾ ಇಡುವುದು ಹಾಗೂ ಇದರ ಸಂಪೂರ್ಣ ಜವಾಬ್ದಾರಿಯನ್ನ ಟಾಸ್ಕ್ ಫೋರ್ಸ್ ನೋಡಿಕೊಳ್ಳಲಿದೆ. ಎ ಸಿಮ್ಟಮ್ಯಾಟಿಕ್ ರೋಗಿಗಳಿಗೆ ವಿಟಮಿನ್ ಸಿ, ಝಿಂಕ್ ಮಾತ್ರೆಗಳನ್ನು ನೀಡಲಾಗುತ್ತೆ. ಇನ್ನು ಇದೆಲ್ಲವೂ ಉಚಿತವಾಗಿ ಇರಲಿದೆ. ಇದಕ್ಕಾಗಿ ಸೋಂಕಿತರು ಹಣ ವ್ಯಯಿಸಬೇಕಿಲ್ಲ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News