ಜಿವಿಕೆ, ಎಂಐಎಎಲ್ ವಿರುದ್ಧ ಹಣ ಅಕ್ರಮ ವರ್ಗಾವಣೆ: ಪ್ರಕರಣ ದಾಖಲು

Update: 2020-07-07 17:49 GMT

ಜಿವಿಕೆ, ಎಂಐಎಎಲ್ ವಿರುದ್ಧ ಹಣ ಅಕ್ರಮ ವರ್ಗಾವಣೆ: ಪ್ರಕರಣ ದಾಖಲು

 ಮುಂಬೈ, ಜು.7: ಮುಂಬೈ ವಿಮಾನನಿಲ್ದಾಣದ ಅಭಿವೃದ್ಧಿ ಯೋಜನೆಗೆ ಮೀಸಲಿರಿಸಿದ್ದ ನಿಧಿಯನ್ನು ದುರುಪಯೋಗಪಡಿಸಿಕೊಂಡಿರುವ ಆರೋಪದಲ್ಲಿ ಜಿವಿಕೆ ಸಮೂಹ ಸಂಸ್ಥೆಗಳ ನಿರ್ದೇಶಕರು ಹಾಗೂ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಎಂಐಎಎಲ್) ಹಾಗೂ ಇತರ ಸಂಸ್ಥೆಗಳ ವಿರುದ್ಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಮುಂಬೈ ವಿಮಾನ ನಿಲ್ದಾಣದ ಕಾರ್ಯಾಚರಣೆಯ ನಿರ್ವಹಣೆಯ ಕಾರ್ಯ ವಹಿಸಿಕೊಂಡಿದ್ದ ಎಂಐಎಎಲ್ ನಲ್ಲಿ ಜಿವಿಕೆ ಸಂಸ್ಥೆ 50.5% ಶೇರು ಹೊಂದಿದೆ. 2017ರಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೇರಿದ 200 ಎಕರೆ ಜಮೀನನ್ನು ಅಭಿವೃದ್ಧಿಗೊಳಿಸುವ ನಕಲಿ ಕಾರ್ಯಯೋಜನೆಯ ಪಟ್ಟಿ ತಯಾರಿಸಿ 310 ಕೋಟಿ ರೂ. ಹಣವನ್ನು ಅಕ್ರಮವಾಗಿ ವರ್ಗಾಯಿಸಿ ದುರುಪಯೋಗಪಡಿಸಿಕೊಳ್ಳಲಾಗಿದೆ. ಇದರ ಸಹಿತ, 2012-18ರ ಅವಧಿಯಲ್ಲಿ ಈ ಸಂಸ್ಥೆ ಸರಕಾರದ ಬೊಕ್ಕಸಕ್ಕೆ 705 ಕೋಟಿ ರೂ. ನಷ್ಟಕ್ಕೆ ಕಾರಣವಾಗಿದೆ . ವಿಮಾನ ನಿಲ್ದಾಣದ ಕೆಲವು ಅಧಿಕಾರಿಗಳೂ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಈ ಹಿನ್ನೆಲೆಯಲ್ಲಿ ವಂಚನೆ ಮತ್ತು ಮೋಸ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ, ಮುಂಬೈ ಮತ್ತು ಹೈದರಾಬಾದ್ನಲ್ಲಿರುವ ಜಿವಿಕೆ ಸಮೂಹ ಸಂಸ್ಥೆಗಳ ಕಚೇರಿಗೆ ದಾಳಿ ನಡೆಸಿ ದಾಖಲೆ ಪತ್ರ ಸಂಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News