ಬ್ಯುಬೋನಿಕ್ ಪ್ಲೇಗ್ ದೊಡ್ಡ ಮಟ್ಟದಲ್ಲಿ ಅಪಾಯ ಒಡ್ಡುವುದಿಲ್ಲ: ವಿಶ್ವ ಆರೋಗ್ಯ ಸಂಸ್ಥೆ

Update: 2020-07-07 17:55 GMT

ಬ್ಯುಬೋನಿಕ್ ಪ್ಲೇಗ್ ದೊಡ್ಡ ಮಟ್ಟದಲ್ಲಿ ಅಪಾಯ ಒಡ್ಡುವುದಿಲ್ಲ: ವಿಶ್ವ ಆರೋಗ್ಯ ಸಂಸ್ಥೆ

ಜಿನೀವ (ಸ್ವಿಟ್ಸರ್ಲ್ಯಾಂಡ್), ಜು. 7: ಚೀನಾದಲ್ಲಿ ಬ್ಯುಬೋನಿಕ್ ಪ್ಲೇಗ್ ಎಂಬಂತೆ ಕಂಡುಬಂದಿರುವ ಸಾಂಕ್ರಾಮಿಕವನ್ನು ‘ಸರಿಯಾಗಿ ನಿಭಾಯಿಸಲಾಗಿದೆ’ ಹಾಗೂ ಅದು ದೊಡ್ಡ ಮಟ್ಟದಲ್ಲಿ ಅಪಾಯವನ್ನು ಒಡ್ಡುವ ಸಾಧ್ಯತೆಯಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರೆ ಮಾರ್ಗರೆಟ್ ಹ್ಯಾರಿಸ್ ಜಿನೀವದಲ್ಲಿ ಮಂಗಳವಾರ ನಡೆದ ಅಶರೀರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಶಂಕಿತ ಬ್ಯುಬೋನಿಕ್ ಪ್ಲೇಗ್ ಪ್ರಕರಣವೊಂದನ್ನು ಆಸ್ಪತ್ರೆಯೊಂದು ವರದಿ ಮಾಡಿದ ಬಳಿಕ ಚೀನಾದ ಇನ್ನರ್ ಮಂಗೋಲಿಯ ವಲಯದ ಬಯನ್ನೂರ್ ನಗರಸಭೆಯ ಅಧಿಕಾರಿಗಳು ರವಿವಾರ ಈ ಕುರಿತು ಎಚ್ಚರಿಕೆ ನೀಡಿದ್ದಾರೆ.

‘ಚೀನಾದಲ್ಲಿನ ಪ್ಲೇಗ್ ಸಾಂಕ್ರಾಮಿಕವನ್ನು ನಾವು ಗಮನಿಸುತ್ತಿದ್ದೇವೆ. ಚೀನಾದ ಅಧಿಕಾರಿಗಳು ಮತ್ತು ಮಂಗೋಲಿಯನ್ ಅಧಿಕಾರಿಗಳ ಸಹಕಾರದಿಂದ ಪರಿಸ್ಥಿತಿಯ ಮೇಲೆ ನಾವು ತೀವ್ರ ನಿಗಾ ಇಟ್ಟಿದ್ದೇವೆ. ಈ ಹಂತದಲ್ಲಿ ಈ ಸಾಂಕ್ರಾಮಿಕವು ಅತಿ ಅಪಾಯಕಾರಿ ಎಂಬುದಾಗಿ ನಾವು ಪರಿಗಣಿಸುವುದಿಲ್ಲ’ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News