ಬೆಂಗಳೂರು: 500ಕ್ಕೂ ಹೆಚ್ಚು ಕ್ಷೌರಿಕ ಅಂಗಡಿಗಳು ಸ್ವಯಂ ಬಂದ್

Update: 2020-07-07 18:09 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.7: ನಗರದಲ್ಲಿ ಕೊರೋನ ಸೋಂಕಿತರ ಪ್ರಮಾಣ ದಿನದಿಂದ ಏರಿಕೆಯಾಗುತ್ತಿರುವ ಹಿನ್ನೆಲೆ ಸಲೂನ್ ಮಾಲಕರು 15 ದಿನಗಳ ಸ್ವಯಂಪ್ರೇರಿತ ನಿರ್ಬಂಧ ಹೇರಿಕೊಂಡಿದ್ದಾರೆ.

ಕೊರೋನ ಭೀತಿ ಹಾಗೂ ಕೊರೋನ ನಿಯಂತ್ರಣಕ್ಕಾಗಿ ನಗರದ ಮಹಾಲಕ್ಷ್ಮೀ ಲೇಔಟ್ ವ್ಯಾಪ್ತಿಯಲ್ಲಿರುವ ಸಲೂನ್ ಮಾಲಕರು 15 ದಿನಗಳ ಕಾಲ ಸಲೂನ್‍ಗಳನ್ನು ಮುಚ್ಚಲು ನಿರ್ಧರಿಸಿದ್ದಾರೆ.

ಮಹಾಲಕ್ಷ್ಮೀ ಲೇಔಟ್ ವ್ಯಾಪ್ತಿಯ ಸುಮಾರು 500 ರಿಂದ 600 ಕಟಿಂಗ್ ಶಾಪ್‍ಗಳು 15 ದಿನಗಳ ಕಾಲ ಬಂದ್ ಆಗಲಿವೆ. ಲಾಕ್‍ಡೌನ್ ಸಡಿಲಿಕೆ ವೇಳೆ ಸಲೂನ್ ಶಾಪ್ ತೆರೆಯಲು ಅನುಮತಿ ಕೊಡಿ ಎಂದು ಒತ್ತಡ ಹಾಕಿದ್ದರು. ಆದರೆ ಈಗ ಬೆಂಗಳೂರಿನಲ್ಲಿ ಕೊರೋನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಲೂಪ್ ಶಾಪ್‍ಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News