ಅಕ್ರಮ ಕೊರೋನ ಪರೀಕ್ಷೆ: ಕ್ಲೀನಿಕ್‍ಗೆ ಬೀಗ ಜಡಿದ ಬಿಬಿಎಂಪಿ

Update: 2020-07-07 18:10 GMT

ಬೆಂಗಳೂರು, ಜು.7: ಅಕ್ರಮವಾಗಿ ಕೊರೋನ ಪರೀಕ್ಷೆ ಮಾಡುತ್ತಿದ್ದ ಹಿನ್ನೆಲೆ ಸದಾಶಿವನಗರದಲ್ಲಿರುವ ಖಾಸಗಿ ಕ್ಲಿನಿಕ್‍ಗೆ ಬಿಬಿಎಂಪಿ ಬೀಗ ಜಡಿದಿದೆ.

ಸೋಮವಾರ ಕೊರೋನ ಪರೀಕ್ಷೆಗೆ ಸ್ವಾಬ್ ತೆಗೆದುಕೊಳ್ಳಲಾಗುತ್ತಿತ್ತು. ಈ ವೇಳೆ ಸ್ಥಳೀಯರು ಮಾಹಿತಿ ನೀಡಿದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ poಲೀಸರು, ಬಿಬಿಎಂಪಿ ಆರೋಗ್ಯಾಧಿಕಾರಿಗಳು ಹೆಲ್ತ್ ಕ್ಲಿನಿಕ್‍ಗೆ ಬೀಗ ಜಡಿದಿದ್ದಾರೆ.

ಕ್ಲಿನಿಕ್‍ನಲ್ಲಿ ಯಾವುದೇ ಮುಂಜಾಗ್ರತೆ ಇರಲಿಲ್ಲ, ಸ್ವಾಬ್ ತೆಗೆದುಕೊಳ್ಳುವವರು ಕೂಡ ಪಿಪಿಇ ಕಿಟ್ ಧರಿಸಿರಲಿಲ್ಲ ಎಂದು ಹೆಲ್ತ್ ಕ್ಲಿನಿಕ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಕ್ಲಿನಿಕ್‍ಗೆ ಬೀಗ ಹಾಕಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News