ಬಿಡಿಎ: 101 ಡಾಟಾ ಎಂಟ್ರಿ ಆಪರೇಟರ್ ಗಳ ವರ್ಗಾವಣೆ

Update: 2020-07-07 18:22 GMT

ಬೆಂಗಳೂರು, ಜು.7: ಬಿಡಿಎ ಕೇಂದ್ರ ವಿಭಾಗೀಯ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 101 ಕಂಪ್ಯೂಟರ್ ಡಾಟಾ ಎಂಟ್ರಿ ಆಪರೇಟರ್‍ಗಳನ್ನು ವರ್ಗಾವಣೆಗೊಳಿಸಿ ಪ್ರಾಧಿಕಾರದ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಡಾಟಾ ಎಂಟ್ರಿ ಆಪರೇಟರ್ ಗಳು ಜು.8 ರಂದು ಬೆಳಗ್ಗೆ 11 ಗಂಟೆಯೊಳಗಾಗಿ ನಿಯೋಜಿಸಿದ ವಿಭಾಗದಲ್ಲಿ ಕರ್ತವ್ಯಕ್ಕೆ ಹಾಜರಾಗಿ ಮೇಲಾಧಿಕಾರಿಗಳಲ್ಲಿ ತಿಳಿಸಬೇಕು. ಖುದ್ದಾಗಿ ಹಾಜರಾತಿಯನ್ನು ಇಡಿಪಿ ವಿಭಾಗಕ್ಕೆ 12ಗಂಟೆಯೊಳಗೆ ಸಲ್ಲಿಸಬೇಕು.

ಒಂದು ವೇಳೆ ವರ್ಗಾಯಿಸಿದ ಸ್ಥಳದಲ್ಲಿ ವರದಿ ಮಾಡಿಕೊಳ್ಳದೇ ಅನಗತ್ಯ ಕಾರಣಗಳನ್ನು ನೀಡಿದರೆ ಹಾಗೂ ಶಿಫಾರಸು ಮಾಡಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News