11ನೆ ತರಗತಿಯ ಪೌರತ್ವ, ರಾಷ್ಟ್ರೀಯತೆ, ಜಾತ್ಯಾತೀತತೆ ಪಠ್ಯಗಳಿಗೆ ಕತ್ತರಿ ಹಾಕಿದ ಸಿಬಿಎಸ್ ಇ

Update: 2020-07-07 18:27 GMT

ಹೊಸದಿಲ್ಲಿ: ಕೊರೋನ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 9ರಿಂದ 12ನೆ ತರಗತಿವರೆಗಿನ ಪಠ್ಯಕ್ರಮವನ್ನು ಕಡಿಮೆಗೊಳಿಸುವುದಾಗಿ ತಿಳಿಸಿದ್ದ ಸಿಬಿಎಸ್ ಇ 11 ತರಗತಿಯ ಪಠ್ಯದಲ್ಲಿ ಒಕ್ಕೂಟ ವ್ಯವಸ್ಥೆ, ಪೌರತ್ವ, ರಾಷ್ಟ್ರೀಯತೆ ಮತ್ತು ಜಾತ್ಯಾತೀತತೆ ಪಠ್ಯಗಳಿಗೆ ಕತ್ತರಿ ಹಾಕಿದೆ.

ಇದಲ್ಲದೆ, “ನಮಗೆ ಸ್ಥಳೀಯ ಸರಕಾರಗಳು ಏಕೆ ಬೇಕು?’, ‘ಭಾರತದಲ್ಲಿ ಸ್ಥಳೀಯ ಸರಕಾರಗಳ ಬೆಳವಣಿಗೆಗಳು’ ಎನ್ನುವ ಉಪ ವಿಭಾಗಗಳಿಗೂ ಕತ್ತರಿ ಹಾಕಲಾಗಿದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಕೊರೋನ ಹಿನ್ನೆಲೆಯಲ್ಲಿ ಹಲವು ದಿನಗಳು ನಷ್ಟವಾಗಿರುವುದರಿಂದ 9ರಿಂದ 12ನೆ ತರಗತಿವರೆಗಿನ ಪಠ್ಯಕ್ರಮದಲ್ಲಿ 30 ಶೇಕಡದಷ್ಟನ್ನು ಕಡಿತಗೊಳಿಸಬೇಕು ಎಂದು ಸಚಿವಾಲಯ ಸಿಬಿಎಸ್ ಇಗೆ ಸೂಚನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News