ಜು.10ರಂದು ಐಸಿಎಸ್ಇ, ಐಎಸ್ಸಿ ಪರೀಕ್ಷೆ ಫಲಿತಾಂಶ

Update: 2020-07-09 20:09 GMT

ಹೊಸದಿಲ್ಲಿ, ಜು.10: ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್(ಐಸಿಎಸ್ಇ)ನ 10ನೇ ತರಗತಿ ಹಾಗೂ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್(ಐಎಸ್ಸಿ)ಯ 12ನೇ ತರಗತಿ ಪರೀಕ್ಷೆಯ ಫಲಿತಾಂಶ ಶುಕ್ರವಾರ ಅಪರಾಹ್ನ 3 ಗಂಟೆಗೆ ಪ್ರಕಟವಾಗಲಿದೆ ಎಂದು ಐಎಸ್ಸಿ ಪರೀಕ್ಷಾ ಸಮಿತಿ ಹೇಳಿದೆ.

ಪರೀಕ್ಷೆಯ ಫಲಿತಾಂಶ ಪರೀಕ್ಷಾ ಸಮಿತಿಯ ವೃತ್ತಿ ಪೋರ್ಟಲ್ ನಲ್ಲಿ ಅಕ್ಷರ ಸಂದೇಶ(ಟೆಕ್ಸ್ಟ್ ವೆುಸೇಜ್)ದ ಮೂಲಕ ಅಥವಾ ಸಮಿತಿಯ ವೆಬ್ಸೈಟ್ www.cisce.orgಯಲ್ಲಿ ಪ್ರಕಟವಾಗಲಿದೆ. ವೆಬ್ ಸೈಟ್ ಮೂಲಕ ಅಭ್ಯರ್ಥಿಗಳು ನೇರವಾಗಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

 ಮಾರ್ಚ್ ನಲ್ಲಿ ನಡೆಯಬೇಕಿದ್ದ ಈ ಪರೀಕ್ಷೆಗಳನ್ನು ಕೊರೋನ ವೈರಸ್ ಕಾರಣದಿಂದ ಮುಂದೂಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News