ದೇಶದಲ್ಲಿ 3 ದಿನಗಳಲ್ಲಿ 7ರಿಂದ 8 ಲಕ್ಷಕ್ಕೇರಿದ ಕೊರೋನ ಸೋಂಕಿತರ ಸಂಖ್ಯೆ

Update: 2020-07-10 15:22 GMT

ಹೊಸದಿಲ್ಲಿ: ಭಾರತದಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಮೂರೇ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ 7 ಲಕ್ಷದಿಂದ 8 ಲಕ್ಷಕ್ಕೇರಿದೆ ಎಂದು ndtv.com ವರದಿ ಮಾಡಿದೆ.

ಸದ್ಯ ದೇಶದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ 8,01,286.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 2,30,599 ಮತ್ತು ತಮಿಳುನಾಡಿನಲ್ಲಿ 1,30,261 ಪ್ರಕರಣಗಳು ದಾಖಲಾಗಿದ್ದರೆ, ನಂತರದ ಸ್ಥಾನದಲ್ಲಿರುವ ದಿಲ್ಲಿಯಲ್ಲಿ 1,07,051 ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News