ಸಿರಿವಂತಿಕೆಯಲ್ಲಿ ವಾರೆನ್ ಬಫೆಟ್ ರನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ

Update: 2020-07-10 18:13 GMT

 ಮುಂಬೈ,ಜು.10: ರಿಲಾಯನ್ಸ್ ಇಂಡಸ್ಟ್ರೀಸ್ ನ ವರಿಷ್ಠ ಮುಕೇಶ್ ಅಂಬಾನಿ ಅವರ ಒಟ್ಟಾರೆ ಸಂಪತ್ತಿನ ಮೌಲ್ಯ 68.3 ಶತಕೋಟಿ ಡಾಲರ್ ಗಳಿಗೆ ತಲುಪಿದ್ದು, ಅವರೀಗ ಸಿರಿವಂತಿಕೆಯಲ್ಲಿ ವಾರೆನ್ ಬಫೆಟ್ ರನ್ನು ಮೀರಿಸಿದ್ದಾರೆ ಎಂದು ಬ್ಲೂಮ್ ಬರ್ಗ್ ಬಿಲಿಯಾಧೀಶರ ಸೂಚ್ಯಂಕವು ಪ್ರಕಟಿಸಿದೆ. ಪ್ರಸ್ತುತ ವಾರೆನ್ ಬಫೆಟ್ ಅವರ ಸಂಪತ್ತಿನ ಮೌಲ್ಯ 67.9 ಶತಕೋಟಿ ಡಾಲರ್ ಗಳಾಗಿವೆ.

ಬಫೆಟ್ ಅವರು ಈ ವಾರ 2.9 ಶತಕೋಟಿ ಡಾಲರ್ ಹಣವನ್ನು ಸೇವಾ ಕಾರ್ಯಗಳಿಗೆ ದೇಣಿಗೆಯಾಗಿ ನೀಡಿದ ಬಳಿಕ ಅವರ ಸಂಪತ್ತಿನಲ್ಲಿ ಕುಸಿತವಾಗಿದೆ. 63 ವರ್ಷ ವಯಸ್ಸಿನ ಮುಕೇಶ್ ಅಂಬಾನಿ ಈಗ ಜಗತ್ತಿನ 8ನೇ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿದ್ದಾರೆ.

 ಅಂಬಾನಿಯವರ ರಿಲಯನ್ಸ್ ಉದ್ಯಮ ಸಮೂಹದ ಶೇರುಗಳ ಮೌಲ್ಯದಲ್ಲಿ ಮಾರ್ಚ್ ಆನಂತರ ಎರಡು ಪಟ್ಟು ಏರಿಕೆಯಾಗಿವೆ. ಫೇಸ್ಬುಕ್ ಹಾಗೂ ಸಿಲ್ವರ್ಲೇಕ್ ಸೇರಿದಂತೆ ಹಲವಾರು ಕಂಪೆನಿಗಳು ರಿಲಯನ್ಸ್ ಡಿಜಿಟಲ್ ಉದ್ಯಮದಲ್ಲಿ 15 ಶತಕೋಟಿ ಡಾಲರ್ ಗೂ ಹೆಚ್ಚು ಹೂಡಿಕೆಯನ್ನು ಮಾಡಿವೆ. ಈ ವಾರ ಅಂತಾರಾಷ್ಟ್ರೀಯ ತೈಲೋದ್ಯಮ ಸಂಸ್ಥೆ ಬಿಪಿ ಪಿಎಲ್ಸಿಯು ರಿಲಾಯನ್ಸ್ ನ ಬಿಡಿ ಇಂಧನ ಮಾರಾಟ ಉದ್ಯಮದಲ್ಲಿ 1 ಶತಕೋಟಿ ಡಾಲರ್ ಹೂಡಿಕೆ ಮಾಡಿತ್ತು

ಮುಕೇಶ್ ಅಂಬಾನಿ, ಜಗತ್ತಿನ ಟಾಪ್ 10 ಶ್ರೀಮಂತರ ಸಾಲಿನಲ್ಲಿರುವ ಏಕೈಕ ಏಶ್ಯನ್ ಉದ್ಯಮಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News