ಐಸಿಎಸ್‍ಇ 10ನೆ ತರಗತಿಯ ಫಲಿತಾಂಶ: ಶೇ.100ರಷ್ಟು ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳು

Update: 2020-07-11 16:42 GMT

ಬೆಂಗಳೂರು, ಜು. 11: ಹೊಸದಿಲ್ಲಿಯ ದಿ ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ಇಂದು ಐಸಿಎಸ್‍ಇ 10ನೆ ತರಗತಿಯ ಫಲಿತಾಂಶ ಪ್ರಕಟಿಸಿದ್ದು, ಐಸಿಎಸ್‍ಇ ಪರೀಕ್ಷೆಯಲ್ಲಿ ಒಟ್ಟು 2.06 ಲಕ್ಷ ಅಭ್ಯರ್ಥಿಗಳು ಯಶಸ್ವಿಯಾಗಿದ್ದಾರೆ. ಬೆಂಗಳೂರಿಗೆ ಹೆಮ್ಮೆ ತಂದಿರುವ ಜೆ.ಪಿ.ನಗರದ ಏಕ್ಯ ಸ್ಕೂಲ್‍ನ ಮೂವರು ವಿದ್ಯಾರ್ಥಿಗಳು ಮೂರು ವಿಷಯಗಳಲ್ಲಿ ಶೇ.100 ಅಂಕ ಪಡೆದಿದ್ದು, ಶ್ರೇಷ್ಠ ಸಾಧನೆ ಮಾಡಿದ್ದಾರೆ.

ಜೊತೆಗೆ ಎಲ್ಲರೂ 10ನೆ ತರಗತಿಯ ಫಲಿತಾಂಶದಲ್ಲಿ ಶೇ.95ರಷ್ಟು ಅಂಕಗಳನ್ನು ಪಡೆದಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿ ಎರಡು ವಿಷಯಗಳಲ್ಲಿ ಶೇ.100ರಷ್ಟು ಅಂಕ ಗಳಿಸಿದ್ದಾರೆ. ಇದರಿಂದ ಶಾಲೆಗೆ ನಾಲ್ಕು ಮಂದಿ ನೂರು ಅಂಕ ಪಡೆದಂತಾಗಿದೆ.

ಜಾಹ್ನವಿ ರಾಜೇಶ್ ಶೇ.98ರಷ್ಟು, ಪ್ರಸಿದ್ಧ ಪ್ರದೀಪ್ ಶೇ.97.17 ಮತ್ತು ಸುಶಾಂತ್ ಆರ್.ನಾಯಕ್ ಶೇ.95.50ರಷ್ಟು ಅಂಕ ಪಡೆದಿದ್ದು ಅವರೆಲ್ಲರೂ ಇತಿಹಾಸ ಮತ್ತು ಪೌರನೀತಿ, ಭೂಗೋಳಶಾಸ್ತ್ರ ಮತ್ತು ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಷಯಗಳಲ್ಲಿ 100 ಅಂಕ ಪಡೆದಿದ್ದಾರೆ.

ವೈಷ್ಣವಿ ಆರ್. ಇತಿಹಾಸ ಮತ್ತು ಪೌರನೀತಿಯಲ್ಲಿ ಶೇ.100 ಅಂಕ ಪಡೆದಿದ್ದು, ಒಟ್ಟು ಶೇ.96ರಷ್ಟು ಅಂಕ ಪಡೆದಿದ್ದಾರೆ ಮತ್ತು ಆರ್ಯನ್ ಕಶ್ಯಪ್ ನವೀನ್ ಶ.96ರಷ್ಟು ಅಂಕ ಪಡೆದಿದ್ದಾರೆ. ಏಕ್ಯ ಸ್ಕೂಲ್‍ನ ಮತ್ತೊಬ್ಬ ಟಾಪರ್ ಆಕಾಶ್ ಚಿನ್ನಿ ಶೇ.96.83ರಷ್ಟು ಅಂಕ ಪಡೆದಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಪರೀಕ್ಷೆ ಬರೆದವರಲ್ಲಿ ಶೇ.54.19ರಷ್ಟು ವಿದ್ಯಾರ್ಥಿಗಳು ಬಾಲಕರಾಗಿದ್ದರೆ, ಶೇ.45.81ರಷ್ಟು ಬಾಲಕಿಯರಾಗಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News