ಕೋವಿಡ್-19 ಕಣ್ಗಾವಲು ಸಮಿತಿ ರಚಿಸಿಲ್ಲ: ವೈರಲ್ ಸಂದೇಶದ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ

Update: 2020-07-11 15:23 GMT

ಹೊಸದಿಲ್ಲಿ,ಜು.11: ಕೋವಿಡ್-19 ಕಣ್ಗಾವಲು ಸಮಿತಿಯೊಂದನ್ನು ರಚಿಸಲಾಗಿದೆಯೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ನೋಟಿಸೊಂದು ನಕಲಿಯಾಗಿದ್ದು, ಅಂತಹ ಯಾವುದೇ ಸಮಿತಿಯನ್ನು ರಚಿಸಿಲ್ಲವೆಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ವಕ್ತಾರ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಈ ನಕಲಿ ಆದೇಶದ ಒಕ್ಕಣೆ ಹೀಗಿದೆ. ‘‘ 2020ರ ಮೇ 18ರಂದು ಸೋಮವಾರ ಕೇಂದ್ರ ಗೃಹ ವ್ಯವಹಾರಗಳ ಸಚಿವರಿಂದ ಸ್ವೀಕರಿಸಲಾದ ಅಧಿಕೃತ ಆದೇಶದ ಅನುಸಾರ, ವಿಶೇಷ ಸ್ಥಿತಿಗತಿ ಸಲಹಾ ಸಮಿತಿಯ ಅನುಮೋದನೆಯೊಂದಿಗೆ 2020 ಜೂನ್ 12ರಂದು ಕೋವಿಡ್-19 ಕಣ್ಗಾವಲು ಸಮಿತಿಯೊಂದನ್ನು ರಚಿಸಲಾಗಿದೆ’’.

 ಆದರೆ ಈ ನೋಟಿಸ್ ಸಂಪೂರ್ಣವಾಗಿ ನಕಲಿ ಎಂದಿರುವ ಕೇಂದ್ರ ಗೃಹ ಸಚಿವಾಲಯದ ವಕ್ತಾರರು, ಇಂತಹ ಸುದ್ದಿಗಳು ಹಾಗೂ ವದಂತಿಗಳ ಬಗ್ಗೆ ಜಾಗರೂಕರಾಗಿರುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News