ಶಿವಾಜಿಯ ಅವಮಾನಿಸಿದ ಆರೋಪ: ಸ್ಟ್ಯಾಂಡ್ ಅಪ್ ಕಾಮಿಡಿಯನ್ ಅಗ್ರಿಮಾ ಜೋಶುವಾಗೆ ಅತ್ಯಾಚಾರದ ಬೆದರಿಕೆ

Update: 2020-07-12 12:21 GMT

ಮುಂಬೈ: ಕಳೆದ ಎರಡು ದಿನಗಳಿಂದ ಅತ್ಯಾಚಾರ ಬೆದರಿಕೆ ಮತ್ತು ವ್ಯಾಪಕ ನಿಂದನೆಗಳು ಬರುತ್ತಿವೆ ಎಂದು ಖ್ಯಾತ  ಸ್ಟ್ಯಾಂಡ್ ಅಪ್ ಕಾಮಿಡಿಯನ್ ಅಗ್ರಿಮಾ ಜೋಶುವಾ ಆರೋಪಿಸಿದ್ದಾರೆ. 2019ರ ಅವರ ಸ್ಟ್ಯಾಂಡ್ ಅಪ್ ಕಾಮಿಡಿ ವಿಡಿಯೊ ತುಣುಕಿಗೆ ಸಂಬಂಧಿಸಿ ಈ ಕರೆಗಳು ಬರುತ್ತಿವೆ ಎನ್ನಲಾಗಿದೆ.

ಈ ವಿಡಿಯೊದಲ್ಲಿ ಅವರು ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿಯವರ ಪ್ರತಿಮೆ ಸ್ಥಾಪನೆಯಾಗುತ್ತಿರುವ ಬಗ್ಗೆ ಮತ್ತು ಈ ಪ್ರತಿಮೆ ಬಗೆಗಿನ ಕುಚೋದ್ಯದ ವದಂತಿಗಳ ಬಗ್ಗೆ ಮಾತನಾಡಿದ್ದರು.

ಈ ವಿಡಿಯೊ ಶಿವಾಜಿಯನ್ನು ಅವಮಾನಿಸುವಂತದ್ದು ಎಂದು ಹಲವು ಮಂದಿ ಹೇಳಿದ್ದು, ಅಗ್ರಿಮಾ  ಕ್ಷಮೆಯಾಚಿಸಿ ವಿಡಿಯೊ ವಾಪಾಸು ಪಡೆದಿದ್ದರು. ಆದರೂ ಬೆದರಿಕೆ ಹಾಗೂ ನಿಂದನೆಗಳು ಮುಂದುವರಿದಿವೆ. ಯೂಟ್ಯೂಬ್ ಬಳಕೆದಾರ ಶುಭಂ ಮಿಶ್ರಾ ಎಂಬಾತ ಅಗ್ರಿಮಾ ವಿರುದ್ಧ  ಸಾಮೂಹಿಕ ಅತ್ಯಾಚಾರ ಎಸಗುವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News