ಲಾಕ್‍ಡೌನ್ ನಿಯಮ ಉಲ್ಲಂಘನೆ: ಬೈಕ್ ಸವಾರರಿಗೆ ಬಿತ್ತು ಲಾಠಿ ಏಟು

Update: 2020-07-12 12:57 GMT

ಕಲಬುರ್ಗಿ, ಜು.12: ರವಿವಾರದ ಲಾಕ್‍ಡೌನ್ ನಿಯಮ ಉಲ್ಲಂಘನೆ ಹಿನ್ನೆಲೆ ಅನಗತ್ಯ ಓಡಾಟ ನಡೆಸುತ್ತಿದ್ದ ಬೈಕ್ ಸವಾರರಿಗೆ ಪೊಲೀಸರು ಲಾಠಿ ಏಟು ನೀಡಿದ್ದಾರೆ.

ಲಾಕ್‍ಡೌನ್ ವೇಳೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಯಾವುದೇ ಕಾರಣವಿಲ್ಲದೆ, ಅನಗತ್ಯವಾಗಿ ಸಂಚಾರ ಮಾಡುತ್ತಿದ್ದ ಬೈಕ್ ಸವಾರರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದರು. ಉದ್ದೇಶಪೂರ್ವಕವಾಗಿ ಓಡಾಟ ನಡೆಸುತ್ತಿರುವವರಿಗೆ ಲಾಠಿ ಏಟು ನೀಡಿ, ಹಿರಿಯ ಅಧಿಕಾರಿಗಳು ಬುದ್ಧಿವಾದ ಹೇಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News