'ನಾನು, ನನ್ನ ಕುಟುಂಬ, ನನ್ನ ಬೂತ್' ಸಂಕಲ್ಪದೊಂದಿಗೆ ಬೂತ್ ಮಟ್ಟದ ಟಾಸ್ಕ್ ಫೋರ್ಸ್ ತಂಡ ರಚನೆ: ಡಾ.ಸುಧಾಕರ್

Update: 2020-07-12 16:20 GMT

ಬೆಂಗಳೂರು, ಜು.12: ಕೊರೋನ ಸೋಂಕನ್ನು ಶೀಘ್ರವಾಗಿ ಪತ್ತೆಹಚ್ಚಿ ನಿಯಂತ್ರಣಕ್ಕೆ ತಂದು ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲೆ ಪ್ರಥಮ ಬಾರಿಗೆ 'ನಾನು ನನ್ನ ಕುಟುಂಬ ನನ್ನ ಬೂತ್' ಎಂಬ ಸಂಕಲ್ಪದೊಂದಿಗೆ ಬೂತ್ ಟಾಸ್ಕ್ ಫೋರ್ಸ್ ತಂಡ ರಚಿಸಲಾಗಿದೆ ಎಂದು ತಿಳಿಸಿದರು.

ರವಿವಾರ ಯಲಹಂಕ ಜನರಲ್ ಆಸ್ಪತ್ರೆಯಲ್ಲಿ ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ರ‍್ಯಾಪಿಡ್ ಪರೀಕ್ಷೆಯಿಂದ ಕೇವಲ 20 ನಿಮಿಷದಲ್ಲಿ ಕೊರೋನ ವರದಿ ಪಡೆಯಬಹುದು ಮತ್ತು ಇದಕ್ಕೆ ಯಾವುದೇ ಆಧುನಿಕ ಪ್ರಯೋಗಾಲಯದ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.

ಪ್ರಥಮ ಬಾರಿಗೆ ಮನೆಮನೆಗೆ ತೆರಳಿ ರ‍್ಯಾಪಿಡ್ ಟೆಸ್ಟ್ ಮಾಡಲು ರಾಜ್ಯದಲ್ಲೆ ಪ್ರಥಮ ಬಾರಿಗೆ ತಂಡ ರಚಿಸಿ, ಮನೆಮನೆಗೆ ತೆರಳಿ ಸೋಂಕಿತರನ್ನು ಪತ್ತೆ ಹಚ್ಚಿ ಪರೀಕ್ಷೆ ಮಾಡಲಾಗುವುದು. ಈ ಪರೀಕ್ಷೆಯಲ್ಲಿ ಕೇವಲ 20 ನಿಮಿಷದಲ್ಲೇ ಫಲಿತಾಂಶ ಕೈ ಸೇರಲಿದೆ. ಹೀಗಾಗಿ ರೋಗಪತ್ತೆ ಬಹಳಷ್ಟು ಸುಲಭವಾಗಲಿದೆ ಎಂದು ತಿಳಿಸಿದರು.

ಕೊರೋನ ಸೋಂಕು ಧೃಢಪಟ್ಟವರಿಗೆ ಮತ್ತು ಸೋಂಕಿತರ ಪ್ರಾಥಮಿಕ ಸಂಪರ್ಕಗಳಿಗೆ ಮಾಹಿತಿ ನೀಡಲು, ರೋಗ ಲಕ್ಷಣವಿರುವ ಸೋಂಕಿತರ ಪತ್ತೆಗಾಗಿ, ರೋಗಲಕ್ಷಣವಿಲ್ಲದ ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್ ಮತ್ತು ರೋಗ ಲಕ್ಷಣವಿದ್ದವರಿಗೆ ಆಸ್ಪತ್ರೆ, ಆಂಬುಲೆನ್ಸ್ ಸಂಯೋಜನೆಗಾಗಿ ಮತ್ತು ಇತರೆ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಸಾಹಾಯವಾಣಿ ಕಲ್ಪಿಸುವುದು ಎಂದರು.

ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ ಅವಶ್ಯಕತೆ ಇರುವ ಕ್ಲಸ್ಟರ್ ಗಳನ್ನು ಗುರುತಿಸುವುದು ಮತ್ತು ರೋಗಿಗಳನ್ನು ದಾಖಲಿಸಿಕೊಳ್ಳಲು ಇರುವ ಗೊಂದಲ ನಿವಾರಿಸಲು ಆಸ್ಪತ್ರೆಗಳಲ್ಲಿ ಆಂಟಿಜೆನ್ ಟೆಸ್ಟ್ ವ್ಯವಸ್ಥೆ ಕಲ್ಪಿಸುವುದು ಎಂದು ತಿಳಿಸಿದರು.

ಆರ್.ಟಿ- ಪಿಸಿಆರ್ ಪರೀಕ್ಷೆಯ ಸ್ಯಾಂಪಲ್‍ಗಳನ್ನು ಸರಕಾರಿ ಮತ್ತು ಖಾಸಗಿ ಲ್ಯಾಬ್‍ಗಳಿಗೆ ಸಮರ್ಪಕವಾಗಿ ಹಂಚುವ ಮೂಲಕ ವರದಿ ವಿಳಂಬವಾಗದಂತೆ ಕ್ರಮ ಕೈಗೊಳ್ಳುವುದು. ಆಂಬ್ಯುಲೆನ್ಸ್ ಲಭ್ಯತೆ ಹೆಚ್ಚಿಸುವುದು ಮತ್ತು ರಾಪಿಡ್ ಆಂಟಿಜೆನ್ ಟೆಸ್ಟ್ ಗಾಗಿ ಮೊಬೈಲ್ ಟೆಸ್ಟಿಂಗ್ ವಾಹನ ಸಜ್ಜುಗೊಳಿಸುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News