ಕೊರೋನ ಮತ್ತಷ್ಟು ಭೀಕರ: ಸದ್ಯ ಜಗತ್ತು ಸಹಜಸ್ಥಿತಿಗೆ ಮರಳದು ಎಂದ ಡಬ್ಲ್ಯುಎಚ್‌ಓ

Update: 2020-07-14 03:55 GMT

ಲಂಡನ್, ಜು.14: ವಿಶ್ವದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ಮತ್ತಷ್ಟು ಉಲ್ಬಣವಾಗಿದ್ದು, ಸದ್ಯೋಭವಿಷ್ಯದಲ್ಲಿ ಜಗತ್ತು ಹಿಂದಿನ ಸಹಜ ಸ್ಥಿತಿಗೆ ಮರಳಲಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಹಳೆಯ ಸಹಜ ಸ್ಥಿತಿಗೆ ಜಗತ್ತು ಸದ್ಯಕ್ಕಂತೂ ಮರಳುವ ಸೂಚನೆ ಕಾಣಿಸುತ್ತಿಲ್ಲ ಡಬ್ಲ್ಯುಎಚ್‌ಓ ಮುಖ್ಯಸ್ಥ ಟೆಡ್ರೋಸ್ ಅಧನೊಮ್ ಘೆಬ್ರೆಯೆಸ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಯೂರೋಪ್ ಹಾಗೂ ಏಷ್ಯಾದಲ್ಲಿ ಹಲವು ದೇಶಗಳು ಸಾಂಕ್ರಾಮಿಕವನ್ನು ನಿಯಂತ್ರಿಸಿದ್ದರೂ, ಇತರ ಹಲವು ಕಡೆಗಳಲ್ಲಿ ವೈರಸ್ ಪ್ರವೃತ್ತಿ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಹಲವು ದೇಶಗಳಲ್ಲಿ ಹೆಚ್ಚುತ್ತಿರುವ ಹೊಸ ಪ್ರಕರಣಗಳನ್ನು ನಿಭಾಯಿಸಲು ಸರ್ಕಾರಗಳು ಸಮಗ್ರ ಕಾರ್ಯತಂತ್ರವನ್ನು ಅನುಸರಿಸಬೇಕಾಗಿದೆ ಎಂದು ಸೂಚಿಸಿದ ಅವರು, ಒಟ್ಟು ಪ್ರಕರಣಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಅಮೆರಿಕದಲ್ಲಿ ದಾಖಲಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಸಾಂಕ್ರಾಮಿಕ ಆತಂಕಕಾರಿ ಪ್ರಮಾಣದಲ್ಲಿ ಹರಡುತ್ತಿದ್ದರೂ, ನಿಯಂತ್ರಿಸಲಾಗದ ಸ್ಥಿತಿ ತಲುಪಿಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News